Top

ಮನೆಯಲ್ಲೇ ಚಿಕ್ಕ ಪಾಟ್‌ನಲ್ಲಿ ಸ್ಟ್ರಾಬೇರಿ ಬೆಳಿಯಬಹುದು ಗೊತ್ತಾ..?: ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..

ಮನೆಯಲ್ಲೇ ಚಿಕ್ಕ ಪಾಟ್‌ನಲ್ಲಿ ಸ್ಟ್ರಾಬೇರಿ ಬೆಳಿಯಬಹುದು ಗೊತ್ತಾ..?: ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..
X

ಹಿಂದಿನ ಕಾಲದಲ್ಲಿ ಜನ ತರಕಾರಿ ತರಲು ಹೆಚ್ಚು ಮಾರುಕಟ್ಟೆಗೆ ಹೋಗುತ್ತಿರಲಿಲ್ಲವಂತೆ. ಅಗತ್ಯವಿರುವ ತರಕಾರಿ , ಹಣ್ಣುಗಳನ್ನಷ್ಟೇ ಕೊಂಡು ತರುತ್ತಿದ್ದರು. ಯಾಕಂದ್ರೆ ಅಂದಿನ ಕಾಲದವರು ಮನೆಯಲ್ಲೇ ತರಕಾರಿ ಬೆಳೆಯುತ್ತಿದ್ದರು. ಶ್ರೀಮಂತರು ತೋಟದಲ್ಲಿ ತರಕಾರಿ ಬೆಳೆದರೆ, ಸಾಮಾನ್ಯರು ತಮ್ಮ ಹಿತ್ತಲಲ್ಲೇ ಚಿಕ್ಕಪುಟ್ಟ ತರಕಾರಿ ಬೆಳೆದು ಬಳಸುತ್ತಿದ್ದರು.

ಇಂದಿಗೂ ಕೆಲ ಹಳ್ಳಿಗಳಲ್ಲಿ, ಊರುಗಳಲ್ಲಿ ಹಿತ್ತಲಲ್ಲಿ, ತೋಟದಲ್ಲಿ ತರಕಾರಿ, ಹಣ್ಣು, ಹೂವು ಬೆಳೆಯುತ್ತಾರೆ. ಆದ್ರೆ ಸಿಟಿಗಳಲ್ಲಿ ಹಿತ್ತಲು ತೋಟ ಕಾಣುವುದು ಅಪರೂಪ. ಗಂಡ ಹೆಂಡತಿ ಇಬ್ಬರು ಕೆಲಸದಲ್ಲಿ ಬ್ಯುಸಿ ಇರುವ ಕಾರಣ ಹಣ್ಣು, ತರಕಾರಿ ಬೆಳೆಯುವ ಬಗ್ಗೆ ಎಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೂ ಅಲ್ಲದೇ, ಇರುವ ಮನೆಯಲ್ಲಿ ಹೆಚ್ಚು ಜಾಗವಿಲ್ಲವೆಂದು ತರಕಾರಿ ಬೆಳೆಯುವ ಗೌಜಿಗೇ ಹೋಗುವುದಿಲ್ಲ. ಆದ್ರೆ ಇತ್ತೀಚೆಗೆ ಹೋಮ್ ಗಾರ್ಡೆನಿಂಗ್ ಎಂಬ ಕಾನ್ಸೆಪ್ಟ್ ಸಖತ್ ಸದ್ದು ಮಾಡ್ತಿದೆ. ಈ ಬಗ್ಗೆ ಇಂದಿನ ಟಾಪಿಕ್‌ನಲ್ಲಿ ನೋಡೋಣ ಬನ್ನಿ.

ಇರುವ ಜಾಗದಲ್ಲೇ ಸಿಂಪಲ್‌ ಆಗಿ ಹಣ್ಣು, ತರಕಾರಿ ಹೇಗೆ ಬೆಳೆಸೋದು ಅನ್ನೋದನ್ನ ನಾವು ಹೇಳ್ತೀವಿ. ಆದ್ರೆ ಎಚ್ಚರಿಕೆಯಿಂದ ಲಕ್ಷ್ಯ ಕೊಟ್ಟು ಗಿಡ ಬೆಳೆಸಲು ಪ್ರಯತ್ನಿಸಿದ್ರೆ ಒಳ್ಳೆಯ ಫಸಲು ಬರೋದ್ರಲ್ಲಿ ನೋ ಡೌಟ್. ಚಿಕ್ಕ ಪಾಟ್‌ನಲ್ಲಿ ಸ್ಟ್ರಾಬೇರಿ ಹಣ್ಣನ್ನ ಬೆಳೆಯೋದರ ಬಗ್ಗೆ ತಿಳಿಯೋಣ ಬನ್ನಿ.

ಮೊದಲು ಸ್ಟ್ರಾಬೇರಿ ಹಣ್ಣಿನ ಮೇಲಿರುವ ಬೀಜವನ್ನ ನೀಟಾಗಿ ತೆಗೆಯಿರಿ. ಒಂದು ಸ್ಪೂನ್ ಸ್ಟ್ರಾಬೇರಿ ಬೀಜಗಳನ್ನು ಸಂಗ್ರಹಿಸಿ. ನಂತರ ಒಂದು ಪಾಟ್‌ನಲ್ಲಿ 60% ತೆಂಗಿನ ನಾರಿನ ಪುಡಿ, 40% ಸಾವಯವ ಮಿಶ್ರಗೊಬ್ಬರ(ಮಣ್ಣು, ಕುಳ್ಳಿನ ಪುಡಿ,ಮರಳು), ನೀಮ್ ಕೇಕ್(ಆನ್‌ಲೈನ್‌ನಲ್ಲಿ ಸಿಗುವುದು) ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.

5-6 ಚಿಕ್ಕ ಚಿಕ್ಕ ಪೇಪರ್ ಟೀ ಕಪ್‌ಗಳಲ್ಲಿ ಈ ಮಿಶ್ರಣ ಹಾಕಿ, ಅದರ ಮಧ್ಯ ಭಾಗದಲ್ಲಿ ಸ್ಟ್ರಾಬೇರಿ ಬೀಜಗಳನ್ನ ಹುದುಗಿಸಿಡಿ, ಚೆನ್ನಾಗಿ ನೀರು ಹಾಕಿ ಬೆಳೆಸಿ. ಕೆಲ ದಿನಗಳ ಬಳಿಕ ಕಪ್‌ಗಳಲ್ಲಿ ಸ್ಟ್ರಾಬೇರಿ ಚಿಕ್ಕ ಚಿಕ್ಕ ಗಿಡಗಳು ಕಾಣ ಸಿಗುತ್ತದೆ.

ಈಗ ಮಿಡಿಯಂ ಸೈಜಿನ ಪಾಟ್‌ಗಳನ್ನ ತೆಗೆದುಕೊಂಡು ಅದರಲ್ಲಿ ಮೊದಲು ಬಳಸಿದ ಮಿಶ್ರಗೊಬ್ಬರಗಳನ್ನು ಹಾಕಿ ಸೆಟ್ ಮಾಡಿಕೊಳ್ಳಿ. ಈಗ ಚಿಕ್ಕ ಗಿಡದ ಕಪ್‌ಗಳನ್ನ ರಿಮೂವ್ ಮಾಡಿ, ಗಿಡಕ್ಕೆ ತಾಗಿದ ಮಣ್ಣಿನ ಸಮೇತ ಮಿಡಿಯಂ ಸೈಜಿನ ಪಾಟ್‌ಗಳಲ್ಲಿ ಸೆಟ್ ಮಾಡಿಟ್ಟುಕೊಂಡ ಮಿಶ್ರಗೊಬ್ಬರಗಳ ಮಧ್ಯೆ ಹುದುಗಿಸಿ. ಈಗ ಕರೆಕ್ಟ್ ಆದ ಸ್ಟ್ರಾಬೇರಿ ಗಿಡದ ಪಾಟ್ ಸಿದ್ಧಗೊಂಡಂತೆ.

ಈ ಪಾಟನ್ನ ಸೇಫ್ ಆದ ಜಾಗದಲ್ಲಿರಿಸಿ. ಅಂದ್ರೆ ಈ ಗಿಡಕ್ಕೆ ಹೆಚ್ಚಿನ ಸೂರ್ಯ ಶಾಖ ತಾಗುವಂತಿಲ್ಲ. ಮತ್ತು ಹೆಚ್ಚು ತಂಪಿನ ಜಾಗದಲ್ಲೂ ಇಡುವಂತಿಲ್ಲ, ತಂಪು- ಶಾಖ ಎರಡೂ ಸಮವಾಗಿರಬೇಕು. ಅಲ್ಲದೇ ಮಂಗಗಳು ಬಂದು ಕಾಟ ಕೊಡದಂತೆ ನೋಡಿಕೊಳ್ಳಬೇಕು. ಈಗ ಪ್ರತಿದಿನ ತಪ್ಪದೇ ಗಿಡಕ್ಕೆ ನೀರುಣಿಸುತ್ತಿರಿ. ಕೆಲ ತಿಂಗಳ ನಂತರ ರುಚಿಯಾದ ಸ್ಟ್ರಾಬೇರಿ ಹಣ್ಣಿನ ಉತ್ತಮ ಫಲ ನಿಮ್ಮದಾಗುತ್ತದೆ.

Next Story

RELATED STORIES