ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ: ಬಿಜೆಪಿಗೆ ನಿರಾಸೆ..!

ಚಿಕ್ಕಬಳ್ಳಾಪುರ: ಕಳೆದ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ತನ್ನ ಪಾರುಪತ್ಯದ ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನ ಕಳೆದುಕೊಂಡು ಸತತ ಸೋಲಿನ ನೋವಿನಲ್ಲಿದ್ದ ಕಾಂಗ್ರೆಸ್‌ಗೆ ನಗರಸಭೆ ಚುನಾವಣೆ ಕೊಂಚ ಮಟ್ಟಿನ ನೆಮ್ಮದಿ ನೀಡಿದೆ.

31 ವಾರ್ಡ್‍ಗಳಿಗೆ ಇದೇ ತಿಂಗಳು 9ನೇ ತಾರೀಖು ನಡೆದಿದ್ದ ನಗರಸಭೆ ಚುನಾವಣೆಯಲ್ಲಿ 16 ಸ್ಥಾನ ಗೆಲ್ಲುವ ಮೂಲಕ ಮತ್ತೆ ತನ್ನ ಪಾರುಪತ್ಯ ಸ್ಥಾಪಿಸಿ ನಗರಸಭೆಯ ಮೆಲೆ ಬಾವುಟ ಹಾರಿಸಿದೆ. ಸತತ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸಚಿವ ಡಾ.ಕೆ.ಸುಧಾಕರ್ ನೇತೃತ್ವದ ಬಿಜೆಪಿ 9 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ ಕೇವಲ 2 ಸ್ಥಾನ ಪಡೆಯುವ ಮೂಲಕ ಜೆ.ಡಿ.ಎಸ್ ತನ್ನ ಅಸ್ಥಿತ್ವ ಕಳೆದುಕೊಂಡಿದೆ.

ಸಚಿವರಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಸುಧಾಕರ್ ನೇತೃತ್ವದ ಬಿಜೆಪಿಗೆ ತುಸು ನಿರಾಸೆ ಎದುರಾಗಿದೆ.

Recommended For You

About the Author: user

Leave a Reply

Your email address will not be published. Required fields are marked *