ಸ್ವೀಟ್ ಕಾರ್ನ್ ತಿಂದ್ರೆ ದಪ್ಪ ಆಗ್ತಾರಾ..? ಸಣ್ಣ ಆಗ್ತಾರಾ..?

ಸ್ವೀಟ್ ಕಾರ್ನ್... ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರೋದ್ರಲ್ಲಿ ನೋ ಡೌಟ್. ಹೆಲ್ದಿ, ಟೇಸ್ಟಿ ಸ್ನ್ಯಾಕ್ ಅಂದ್ರೆ ಅದು ಸ್ವೀಟ್ ಕಾರ್ನ್. ಎಲ್ಲಾ ಸಮಯದಲ್ಲೂ ಲಭ್ಯವಿರುವ ಸ್ವೀಟ್ಕಾರ್ನ್ಗೆ ಮಳೆಗಾಲದಲ್ಲಿ ಬೇಡಿಕೆ ಹೆಚ್ಚು. ಅತ್ತ ಜಿಟಿ ಜಿಟಿ ಮಳೆ ಬೀಳ್ತಿದ್ರೆ, ಇತ್ತ ಪಟ ಪಟ ಹುರಿದು ತಿನ್ನೋ ಮೆಕ್ಕೆಜೋಳದ ಟೇಸ್ಟ್ ತಿಂದವನೇ ಬಲ್ಲ. ಆದ್ರೆ ಈ ಸ್ವೀಟ್ ಕಾರ್ನ್ನ್ನ ಯಾವ ರೀತಿ ತಿನ್ಬೇಕು ಅನ್ನೋದು ಕೆಲವರಿಗೆ ಗೊತ್ತಿಲ್ಲ. ಈ ಬಗ್ಗೆ ಇಂದಿನ ಆರ್ಟಿಕಲ್ನಲ್ಲಿ ತಿಳಿಯೋಣ ಬನ್ನಿ.
ಸಂಜೆ ಹೊತ್ತು ಅಥವಾ ತಿಂಡಿ- ಊಟದ ಮಧ್ಯದಲ್ಲಿ ಹಸಿವಾದಾಗ ಸ್ವೀಟ್ ಕಾರ್ನ್ ತಿಂದರೆ ಉತ್ತಮ. ಚಿಪ್ಸ್, ಬಜಿ, ಸ್ಯಾಂಡ್ವಿಚ್, ಬರ್ಗರ್, ಪಿಜ್ಜಾ ತಿನ್ನೋ ಬದ್ಲು ಸ್ವೀಟ್ ಕಾರ್ನ್ ತಿಂದ್ರೆ ನಿಮ್ಮ ಆರೋಗ್ಯಕ್ಕೂ ಒಳ್ಳೆದು, ನಿಮ್ಮ ಜೇಬಿಗೂ ಒಳ್ಳೆದು. ಅದರಲ್ಲೂ ಮನೆಗೆ ಕಾರ್ನ್ ತಂದು ಬೇಯಿಸಿ ಅಥವಾ ಸುಟ್ಟು ತಿಂದರೆ ಇನ್ನೂ ಉತ್ತಮ. ಆದ್ರೆ ಕಾರ್ನ್ ತಿನ್ನುವಾದ ಅದರಲ್ಲಿ ಉಪ್ಪು, ಖಾರ ಮತ್ತು ಬೆಣ್ಣೆ ಪ್ರಮಾಣ ಜಾಸ್ತಿ ಇರದಂತೆ ನೋಡಿಕೊಳ್ಳಿ.
ಸ್ವೀಟ್ಕಾರ್ನ್ ರುಚಿ ಹೆಚ್ಚಿಸಲು ಕಾರ್ನ್ಗೆ ಉಪ್ಪು, ಕಾರ, ಬೆಣ್ಣೆ ಹಾಕಿಬಿಟ್ಟರೆ ನಿಮಗೆ ಪೂರ್ತಿ ಪ್ರಮಾಣದ ಆರೋಗ್ಯ ಲಾಭ ಸಿಗೋದಿಲ್ಲ. ಅದರ ಬದಲು ಕಪ್ಪುಪ್ಪು, ಕಾಳುಮೆಣಸಿನ ಪುಡಿ (ಪೆಪ್ಪರ್ ಪೌಡರ್), ತುಪ್ಪ ಬಳಸಿ. ಇದು ಕೂಡ ಕಡಿಮೆ ಪ್ರಮಾಣದಲ್ಲಿರಲಿ. ಸ್ವಲ್ಪ ನಿಂಬೆರಸ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಇನ್ನು ಕಾರ್ನ್ ಆರೋಗ್ಯಕ್ಕೆ ಒಳ್ಳೆಯದು ಅಂತಾ, ಅದರಿಂದ , ಪಲಾವ್, ರೈಸ್ಭಾತ್, ಬಜ್ಜಿ, ಇತ್ಯಾದಿ ಸ್ನ್ಯಾಕ್ಸ್ಗಳನ್ನ ಮಾಡ್ತಾರೆ. ಆದ್ರೆ ಕರಿದ ಪದಾರ್ಥಗಳಲ್ಲಿ, ಹೆಚ್ಚು ಬೇಯಿಸಿದ ಪದಾರ್ಥಗಳಲ್ಲಿ ಕಾರ್ನ್ ಬಳಸಿದ್ರೆ, ಕಾರ್ನ್ ಅದರ ಸತ್ವ ಕಳೆದುಕೊಳ್ಳುತ್ತದೆ. ಆಗ ಇಂತಹ ಪದಾರ್ಥಗಳಲ್ಲಿ ಕಾರ್ನ್ ಬಳಸಿದರೂ ನೋ ಯ್ಯೂಸ್. ಆದ್ದರಿಂದ ಕಾರ್ನ್ನ್ನ ಕೊಂಚ ಬೇಯಿಸಿ, ಅಥವಾ ಸುಟ್ಟು ತಿನ್ನಬಹುದು. ಸಲಾಡ್ ಮಾಡುವಾಗ ಬಳಸಿದ್ರು ಓಕೆ.
ನಿಯಮಿತ ಪ್ರಮಾಣದ ಸ್ವೀಟ್ ಕಾರ್ನ್ ಸೇವನೆಯಿಂದ ದೇಹದಲ್ಲಿರುವ ಹೆಚ್ಚಿನ ಬೊಜ್ಜನ್ನ ಕರಗುತ್ತದೆ. ನಿಮ್ಮ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲನ್ನ ಕಡಿಮೆ ಮಾಡುತ್ತದೆ.
ಎನಿಮಿಯಾವನ್ನ ದೂರು ಮಾಡುವಲ್ಲಿ ಸಹಕಾರಿ: ಎನಿಮಿಯಾ ಅಂದ್ರೆ ಮನುಷ್ಯನ ದೇಹದಲ್ಲಿ ರಕ್ತದ ಕೊರತೆ ಇರುವುದು. ಸ್ವೀಟ್ ಕಾರ್ನ್ನಲ್ಲಿ ವಿಟಮಿನ್ ಬಿ12, ಐರನ್ ಇರುವುದರಿಂದ ದೇಹದಲ್ಲಿರುವ ರಕ್ತದ ಕೊರತೆ ನೀಗಿಸುವಲ್ಲಿ ಸ್ವೀಟ್ ಕಾರ್ನ್ ಸಹಕಾರಿಯಾಗಿದೆ.
ಸ್ವೀಟ್ ಕಾರ್ನ್ ತಿನ್ನುವುದರಿಂದ ದೇಹದ ತೂಕ ಹೆಚ್ಚಿಸಿಕೊಳ್ಳಲೂಬಹುದು, ಕಡಿಮೆ ಮಾಡಿಕೊಳ್ಳಲೂಬಹುದು. ಅಲ್ಲದೇ, ಫಿಟ್ ಆಗಿ ಕೂಡ ಇರಬಹುದು. ಎಲ್ಲ ಸಮಯದಲ್ಲೂ ಕಾರ್ನ್ ಸುಲಭವಾಗಿ ಸಿಗತ್ತೆ. ಹಾಗಾಗಿ ತೂಕ ಕಳೆದುಕೊಳ್ಳಲು ಇಚ್ಛಿಸುವವರು ವಾರದಲ್ಲಿ 2ರಿಂದ 3 ಬಾರಿ ಕಾರ್ನ್ ತಿನ್ನಬಹುದು. ಹೀಗೆ ತಿನ್ನುವಾಗ ಬಾಣಲೆಗೆ ಜೀರಿಗೆ, ಶೇಂಗಾಕಾಳು,ಹಾಕಿ ಹುರಿಯಿರಿ. ಇದಕ್ಕೆ ಬೇಯಿಸಿದ ಕಾರ್ನ್ ಸೇರಿಸಿ, ಅದರ ಜೊತೆ , ಸಣ್ಣಗೆ ಹೆಚ್ಚಿದ ಸೌತೇಕಾಯಿ, ಈರುಳ್ಳಿ, ಟೊಮೆಟೋ( ಪ್ರತಿನಿತ್ಯ ಟೊಮೆಟೊ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ) ನಿಂಬೆಹಣ್ಣು, ಕಪ್ಪು ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ 2 ನಿಮಿಷ ಹುರಿದು ತಿನ್ನಿ.
ತೂಕ ಹೆಚ್ಚಿಸಲು ಇಚ್ಛಿಸುವವರು ವಾರಕ್ಕೆ ನಾಲ್ಕು ಬಾರಿ ಕಾರ್ನ್ ತಿನ್ನಬಹುದು. ಕಾರ್ನ್ ಬೇಯಿಸುವಾಗ ತುಪ್ಪ ಬಳಸಿದರೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.
ಆದ್ರೆ ನೆನಪಿರಲಿ ಹೆಚ್ಚಾದ್ರೆ ಅಮೃತವೂ ವಿಷವೇ ಎಂಬ ಹಾಗೇ ಮಿತಿಮೀರಿ ಕಾರ್ನ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಲ್ಲ. ನಿಯಮಿತವಾಗಿ ಕಾರ್ನ್ ತಿನ್ನಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.