ಎಂಟಿಬಿ ಮತ್ತು ತಮ್ಮ ನಡುವೆ ಇರುವ ಮನಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್..!

ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ಡಾ.ಸುಧಾಕರ್, ವೈದ್ಯಕೀಯ ಶಿಕ್ಷಣ ಖಾತೆ ಕೊಟ್ಟಿದ್ದಾರೆ ಅದಕ್ಕೆ ಅಭಿನಂದನೆ. ಇಲಾಖೆಯ ಅಭಿವೃದ್ಧಿಗೆ ಕೆಲಸ ಮಾಡ್ತೇನೆ ಎಂದರು. ಅಲ್ಲದೇ ತಮಗೆ ಸಿಕ್ಕ ಖಾತೆ ಬಗ್ಗೆ ನಗೆಚಟಾಕಿ ಹಾರಿಸಿದ ಸುಧಾಕರ್, ನಾನು ಸಿಎಂ ಬೇರೆ ಮಾತುಕತೆ ನಡೆಸಿದ್ದೆವು. ನೀವೇ ವೈದ್ಯಕೀಯ ಶಿಕ್ಷಣ ಅಂತ ಹೇಳಿದ್ದೀರ ಎಂದರು.

ಎಂಟಿಬಿ ನನ್ನ ನಡುವೆ ಮನಸ್ತಾಪ ಎಂಬುದು ಸುಳ್ಳು. ಅವರ ನನ್ನ ಸಂಬಂಧ ಜೀವಮಾನದಲ್ಲಿ ಬದಲಾಗಲ್ಲ . ಅವರು ಸಚಿವರಾಗುವವರೆಗೆ ನಾನು ಪ್ರಮಾಣ ವಚನ ತೆಗೆದುಕೊಳ್ಳುವುದಿಲ್ಲ ಎಂದಿದ್ದೆ. ಅವರಿಗೂ ಒಳ್ಳೆಯದಾಗುತ್ತೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ನಾನು ಸಚಿವ ಸ್ಥಾನ ತೆಗೆದುಕೊಂಡೆ . ಎಂಟಿಬಿ, ಸುಧಾಕರ್ ನಡುವೆ ಯಾವ ಮನಸ್ಥಾಪ ಇಲ್ಲ ಎಂದು ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *