ನಿಖಿಲ್- ರೇವತಿ ನಿಶ್ಚಿತಾರ್ಥದ ಸ್ಪೆಶಾಲಿಟಿ ಏನ್ ಗೊತ್ತಾ..?: ಯುವರಾಜನ ಆಸೆಯಂತೆ ನಡೆದಿದೆ ಎಂಗೇಜ್‌ಮೆಂಟ್..!

ಬೆಂಗಳೂರು: ಇಂದು ನಟ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದ್ದು, ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೇಲ್‌ನಲ್ಲಿ ಶಾಸ್ತ್ರೋಕ್ತವಾಗಿ ಎಂಗೇಜ್‌ಮೆಂಟ್ ಮಾಡಲು ತಯಾರಿ ನಡೆದಿದೆ.

ತಮ್ಮ ಎಂಗೇಜ್‌ಮೆಂಟ್ ಮರಗಿಡಗಳ ನಡುವೆ ನಡೆಯಬೇಕೆಂದು ನಿಖಿಲ್ ಆಸೆಯಾಗಿತ್ತು, ಈ ಕಾರಣಕ್ಕೆ ತಾಜ್‌ವೆಸ್ಟೆಂಡ್ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್ ಕೋರ್ಟ್‌ನಲ್ಲಿ, ಗಿಡ ಮರಗಳ ಮಧ್ಯೆಯೆ ಸಖತ್ ಆಗಿರೋ ವೈಟ್ ಥೀಮ್‌ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಪೇಟ್‌ನಿಂದ ಹಿಡಿದು ಹುಡುಗ ಹುಡುಗಿ ಉಂಗುರ ಬದಲಾಯಿಸುವ ಮಂಟಪ ಕೂಡಾ ಶ್ವೇತ ವರ್ಣದ್ದಾಗಿದೆ.

ಇನ್ನೊಂದು ವಿಶೇಷ ಅಂದ್ರೆ, ಕಾರ್ಯಕ್ರಮ ನಡೆಯುವ ಜಾಗವನ್ನು ಬಿಳಿ ಹೂವಿನಿಂದ ಅಲಂಕರಿಸಲಾಗಿದ್ದು, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿಯ ಬಣ್ಣದ ಹೂವುಗಳನ್ನ ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್‌ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ.

ಇನ್ನು ನಿಖಿಲ್- ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರವನ್ನು ಗೇಟಿನ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಕೇರಳದ ಚಂಡೆ ಸಹ ಇದೆ.

ವಿಐಪಿಗಳಿಗೂ, ಸಾಮಾನ್ಯ ಜನರಿಗೂ ಎಲ್ಲರಿಗೂ ಒಂದೇ ಊಟ ಹಾಕಿಸಲಾಗುತ್ತಿದೆ. ಸುಮಾರು 35 ರೀತಿಯ ಕರ್ನಾಟಕ ಶೈಲಿಯ ಖಾದ್ಯಗಳನ್ನು ಬಂದ ಅತಿಥಿಗಳು ಸವಿಯಲಿದ್ದಾರೆ.

ಗಣಪತಿ ಪೂಜೆ ಕೂಡ ಜೋರಾಗಿದ್ದು, ನಿಖಿಲ್ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಸಂಭ್ರಮದಿಂದ ಪೂಜೆ ತಯಾರಿ ನಡೆಸಿದ್ದಾರೆ. ಹೂವು ಹಣ್ಣು, ಹಾರ, ಉಂಗುರ, ಒಣಹಣ್ಣುಗಳು, ಇತ್ಯಾದಿಗಳನ್ನ ಪೂಜಾ ಪೀಠದ ಬಳಿ ಇರಿಸಿದ್ದು, ಡಿಫ್ರೆಂಟ್ ಆಗಿ ಪೂಜಾಲಂಕಾರ ವಸ್ತುಗಳನ್ನು ಅರೇಂಜ್ ಮಾಡಲಾಗಿದೆ.

Recommended For You

About the Author: user

Leave a Reply

Your email address will not be published. Required fields are marked *