ಒಂದೇ ವೇದಿಕೆಯಲ್ಲಿ ಬಿಎಸ್‌ವೈ, ಹೆಚ್ಡಿಕೆ, ಸಿದ್ದು..?: ಜಾತ್ರೆಗೆ ಮೆರುಗು ತಂದ ಸುದೀಪ್..!

ಬೀದರ್: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ತೆರೆ ಬಿದ್ದಿದೆ. ಕೊನೆಯ ದಿನವಾದ ಇಂದು ಅಭಿನಯ ಚಕ್ರವರ್ತಿ ಸುದೀಪ್ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷಾಗಿತ್ತು. ಸುದೀಪ್ ಬರುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರಾ ಮುಗಿಲು ಮುಟ್ಟಿತ್ತು.

ಸುದೀಪ್ ವೇದಿಗೆ ಮೇಲೆ ಬರುತ್ತಿದ್ದಂತೆ ಅವರನ್ನು ಪ್ರಸನ್ನಾನಂದ ಸ್ವಾಮೀಜಿ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಸುದೀಪ್ ನನಗೆ ಸಿನಿಮಾ ಬಿಟ್ಟು ಬೇರೆ ಏನೂ ಬರೊಲ್ಲಾ, ಕಳೆದ 25 ವರ್ಷಗಳಿಂದ ಸಿನಿಮಾದಲ್ಲಿ ಬೆರೆತು ಹೋಗಿದ್ದೇನೆ ಎಂದ ಸುದೀಪ್ ನಾನು ಬಿದ್ದಾಗ ನನ್ನನ್ನು ಮೇಲೆತ್ತಿದ ನಿಮಗೆ ಧನ್ಯವಾದ ಎಂದರು.

ಇದೇ ವೇಳೆ ಅಭಿಮಾನಿಗಳ ಒತ್ತಾಸೆಯಂತೆ ವೀರಮದಕರಿ ಸಿನಿಮಾ ಡೈಲಾಗ್ ಹೊಡೆದು ಮುಸ್ಸಂಜೆ ಮಾತು ಸಿನಿಮಾದ ಹಾಡು ಹಾಕಿ, ಕೊನೆಗೆ ಬಿಗ್ ಬಾಸ್ ವಾಸುಕಿ ರಚಿಸಿದ ಹಾಡನ್ನು ಹಾಡಿ ಅಭಿಮಾನಿಗಳಿಗೆ ಸಂಭ್ರಮ ಉಣ ಬಡಿಸಿದರು.

Recommended For You

About the Author: user

Leave a Reply

Your email address will not be published. Required fields are marked *