ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ: ಕೊನೆಗೂ ತನಗೆ ಬೇಕಾದ ಖಾತೆ ಪಡೆದ ಜಾರಕಿಹೊಳಿ..!

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಕೊನೆಗೂ ರಮೇಶ್ ಜಾರಕಿಹೊಳಿಗೆ ತಮಗೆ ಬೇಕಾದ ಜಲಸಂಪನ್ಮೂಲ ಖಾತೆ ಸಿಕ್ಕಿದೆ.

ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ನಿರ್ವಹಣೆಯಲ್ಲಿ ಯಾವ ಬದಲಾವಣೆಯೂ ಮಾಡಲಾಗಿಲ್ಲ. ಬೆಂಗಳೂರು ಅಭಿವೃದ್ಧಿ ಖಾತೆ ಸಿಎಂ ಬಳಿಯೇ ಉಳಿಯಲಿದ್ದು, ಬಸವರಾಜ ಬೊಮ್ಮಾಯಿ ಅವರೇ ಗೃಹ ಮಂತ್ರಿಯಾಗಿ ಮುಂದುವರಿಯಲಿದ್ದಾರೆ.

ಇನ್ನು ಹಿರಿಯ ಸಚಿವರ ಬಳಿ ಇದ್ದ ಹೆಚ್ಚುವರಿ ಖಾತೆಯನ್ನು ಹಿಂಪಡೆದ ಸಿಎಂ ಯಡಿಯೂರಪ್ಪ, ಆ ಖಾತೆಗಳನ್ನು ನೂತನ ಸಚಿವರಿಗೆ ನೀಡಿದ್ದಾರೆ. ಆದ್ರೆ ಹಿರಿಯ ಸಚಿವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೆಲ ನೂತನ ಸಚಿವರ ಸಂಭಾವ್ಯ ಖಾತೆಗಳ ವಿವರ ಟಿವಿ5ಗೆ ಲಭ್ಯವಾಗಿದೆ.

ಶಿವರಾಮ್ ಹೆಬ್ಬಾರ್- ಕಾರ್ಮಿಕ

ಬಿ.ಸಿ.ಪಾಟೀಲ್ – ಅರಣ್ಯ

ರಮೇಶ್- ಜಲಸಂಪನ್ಮೂಲ

ಶ್ರೀಮಂತ ಪಾಟೀಲ್- ಜವಳಿ

ಸುಧಾಕರ್ – ವೈದ್ಯಕೀಯ

ಆನಂದ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ

ನಾರಾಯಣಗೌಡ- ಪೌರಾಡಳಿತ ಮತ್ತು ತೋಟಗಾರಿಕೆ

ಬೈರತಿ ಬಸವರಾಜ್- ನಗರಾಭಿವೃದ್ದಿ ಹೊರತು ಪಡಿಸಿ

ಸೋಮಶೇಖರ್- ಸಹಕಾರ

ಗೋಪಾಲಯ್ಯ- ಸಣ್ಣ ಕೈಗಾರಿಕೆ

Recommended For You

About the Author: user

Leave a Reply

Your email address will not be published. Required fields are marked *