‘ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ, ಬಿಎಸ್‌ವೈ ಬೆಸ್ಟ್ ಬಜೆಟ್ ಕೊಡ್ತಾರೆ’

ಮೈಸೂರು: ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಮಂತ್ರಿ ಮಂಡಲ ವಿಸ್ತರಣೆ ಬಳಿಕ ಏನೇನೋ ಆಗುತ್ತೆ ಅಂದುಕೊಂಡಿದ್ದರು. ಆದ್ರೆ ಯಾವುದೇ ಸಮಸ್ಯೆ ಇಲ್ಲದೆ ಬಿಎಸ್‌ವೈ ಆಡಳಿತ ನಡೆಸುತ್ತಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಗೊಂದಲಗಳು ಇದ್ದವು. ಗೊಂದಲ ನಿವಾರಣೆ ಮಾಡಿದ ಯಡ್ಯೂರಪ್ಪ ಎಲ್ಲವನ್ನು ನಿಭಾಯಿಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ಇನ್ನು 6 ಸ್ಥಾನ ಖಾಲಿ ಇದೆ. ಅದನ್ನು ಶಿಘ್ರದಲ್ಲೇ ತುಂಬಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ ಎಂದು ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಬಜೆಟ್ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ ಎಂಬ ಕೈ ಆರೋಪ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಿದ್ದಾರೆ. ಅವರು ಬಜೆಟ್ ಬಗ್ಗೆ ಕೆಲಸ ಮಾಡ್ತಿಲ್ಲ ಅಂದ್ರೆ ಅಪಹಾಸ್ಯವಾಗುತ್ತೆ. ಯಡ್ಯೂರಪ್ಪನವರು ಈಗಾಗಲೇ ಬಜೆಟ್ ಸಭೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಉತ್ತಮ ಬಜೆಟ್ ಕೊಡ್ತಾರೆ ಎಂದು ಹೇಳಿದ್ದಾರೆ.

ವಿಶ್ವನಾಥ್ ಹಾಗೂ ಎಂಟಿಬಿಗೆ ಯಡ್ಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ತಾರೆ. ಯಡ್ಯೂರಪ್ಪ ಯಾರಿಗೂ ಕೊಟ್ಟ ಮಾತು ತಪ್ಲಿಲ್ಲ. ವಿಶ್ವನಾಥ್ ಹಾಗೂ ಎಂಟಿಬಿಗೂ ಕೊಟ್ಟ ಮಾತು ಉಳಿಸಿಕೊಳ್ತಾರೆ. ಇನ್ನು 6 ಸ್ಥಾನ ಬಾಕಿ ಇದೆ. ಅದರಲ್ಲಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಅವಕಾಶ ಸಿಗಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *