‘ಕನಸಲ್ಲಿ ರಾಜಬಂದ ಹಾಗೇ ಸಿಎಂ ಆಗಿದ್ರೀ.. ಈಗ ನೀವು ಅಡ್ರೆಸ್‌ನಲ್ಲಿ ಇದ್ದೀರಾ…?’

ಶಿವಮೊಗ್ಗ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಶಿವಮೊಗ್ಗದಲ್ಲಿ ಮಾತನಾಡಿದ್ದು, ಬಿಜೆಪಿ ಸರ್ಕಾರ ಹೆಚ್ಚುದಿನ ಇರಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಮೇಲೆ ಅವರ ಮನಸ್ಥಿತಿ ಸರಿಯಿಲ್ಲ. ಹುಚ್ಚು ಹುಚ್ಚಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಗೆ ಹೇಳಲು ಇಷ್ಟಪಡುತ್ತೇನೆ. ನೀವು ಹಗಲು ಕನಸು ಕಾಣಬೇಡಿ. ಸರ್ಕಾರ ಪತನ ಅಗಲ್ಲ. ಯಡಿಯೂರಪ್ಪ ಕಲ್ಲುಬಂಡೆಯ ರೀತಿ. ಮುಂದಿನ ಮೂರವರೆ ವರ್ಷ ಇದೇ ಸರ್ಕಾರವಿರುತ್ತೆ. ಮಾತ್ರವಲ್ಲದೇ, 2023ಕ್ಕೆ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುತ್ತೇ. ಇದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದಿದ್ದಾರೆ.

ಕುಮಾರಸ್ವಾಮಿ ಅವರು ಬಿಎಸ್ವೈ ಆಶೀರ್ವಾದದಿಂದ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಮತ್ತೇ 37 ಸೀಟ್ ತಗೋಂಡು ಈ ಬಾರಿ ಮುಖ್ಯಮಂತ್ರಿಯಾಗಿದ್ರೀ. ಕನಸಲ್ಲಿ ರಾಜಬಂದ ಹಾಗೇ ಸಿಎಂ ಆಗಿದ್ರೀ.. ಈಗ ನೀವು ಅಡ್ರೇಸ್‌ನಲ್ಲಿ ಇದ್ದೀರಾ…? ಅಧಿಕಾರ ಹೋಗಿದ್ಕೆ ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತೀದ್ದೀರಿ. ಕುಮಾರಸ್ವಾಮಿ ಅವರಿಗೆ ಬುದ್ದಿ ಭ್ರಮಣೆಯಾಗಿದೆ. ಯಡಿಯೂರಪ್ಪ, ಬಿಜೆಪಿಗೆ ಬೈಯ್ಯುವುದೇ ಅವರ ಮನಸ್ಥಿತಿ ಯಾಗಿದೆ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *