ಚಡ್ಡಿಯಾದ್ರು ಹಾಕೊಳ್ಳಿ, ಪ್ಯಾಂಟ್ ಆದ್ರೂ ಹಾಕೊಳ್ಳಿ: ಆರ್‌ಎಸ್ಎಸ್ ಬಗ್ಗೆ ಡಿಕೆಶಿ ವ್ಯಂಗ್ಯ..!

ಬೆಂಗಳೂರು: ರಾಮನಗರದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯವರು ಪಥ ಸಂಚಲನ ನಡೆಸುತ್ತಿರುವ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ರಾಜಕೀಯದ ಚದುರಂಗ ಆಟದಲ್ಲಿ ನಾವು ಯಾಮಾರಿದ್ದೇವೆ . ಹೇಗೆ ರಾಜಕಾರಣ ಮಾಡ್ಬೇಕು ಅಂತ ನಮಗೆ ಗೊತ್ತಿದೆ . ಪಾರ್ಲಿಮೆಂಟ್ ಎಲೆಕ್ಷನ್ ನಂತರ ಬಿಜೆಪಿಗೆ ಬೆಂಬಲ ಕಡಿಮೆ ಆಗಿದೆ . ಏನೇನೋ ಡಿಸ್ಟರ್ಬೆನ್ಸ್ ಮಾಡ್ತಿದೆ ಎಂದಿದ್ದಾರೆ.

ಇನ್ನು ಆರ್‌ಎಸ್‌ಎಸ್‌ ಪಥಸಂಚಲನ ನಡೆಸುತ್ತಿರುವ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದ್ದು, ಪಥ ಸಂಚಲನನಾದ್ರೂ ಮಾಡ್ಲಿ . ಚಡ್ಡಿಯಾದ್ರು ಹಾಕೊಳ್ಳಿ, ಪ್ಯಾಂಟ್ ಆದ್ರೂ ಹಾಕೊಳ್ಳಿ ನಮಗೆ ಅಭ್ಯಂತರ ಇಲ್ಲ . ಈ ಕೇಸ್‌ಗೆ, ಈ ಜೈಲಿಗೆ ಹೆದರಿ ರಾಜಕೀಯ ಮಾಡ್ತಾರಾ..? ಕಾಂಗ್ರೆಸ್‌ನ ಹೋರಾಟ ಬಲಿದಾನದ ನಂತರ ಇವ್ರು ರಾಜಕೀಯ ಮಾಡ್ತಿದ್ದಾರೆ ಎಂದಿದ್ದಾರೆ.

ಆರ್ಎಸ್ಎಸ್, ಬಿಜೆಪಿ ನಡೆಗೆ ಮಾಜಿ ಸಚಿವ ಡಿಕೆಶಿ ಆಕ್ರೋಶ ಹೊರಹಾಕಿದ್ದು, ಅಸೂಯೆ, ಜಲಸ್‌ಗೆ ಮದ್ದು ಇಲ್ಲ. ರಾಜ್ಯದಲ್ಲಿ ಬಿಜೆಪಿಯವರು ೨೫ ಸೀಟು ಗೆದ್ದಿದ್ದಾರೆ. 1 ಸೀಟು ಕಾಂಗ್ರೆಸ್ ಬಂದಿದೆ. 1 ಸೀಟು ಜೆಡಿಎಸ್ ಬಂದಿದೆ. ಇನ್ನೊಂದು ಏನೋ ಒಂದು ಸೀಟು ಬಂದಿದೆ. ನಾವು ಜೆಡಿಎಸ್, ರಾಜಕೀಯ ಚದುರಂಗ ಆಟವನ್ನು ಚೆನ್ನಾಗಿ ಆಡಿದ್ರೆ, ಅವರ 10 ಸೀಟು ಬರ್ತಾ ಇರಲಿಲ್ಲ.

ಲೋಕಸಭಾ ಚುನಾವಣೆ ನಂತರ ಬಿಜೆಪಿಗೆ ನಿರೀಕ್ಷಿತ ಗೆಲುವು ಬಂದಿಲ್ಲ. ಈಗಾಗಲೇ ಮಹಾರಾಷ್ಟ್ರದಲ್ಲೂ ಅವರಿಗೆ ಹಿನ್ನಡೆ ಆಗಿದೆ. ಹರಿಯಾಣದಲ್ಲೂ ಅವರಿಗೆ ಹಿನ್ನಡೆ ಆಗಿದೆ. ರಾಜಸ್ಥಾನದಲ್ಲೂ ಹಿನ್ನಡೆ. ಉತ್ತರ ಭಾರತದತ್ಯಾದ್ಯಂತ ಬಿಜೆಪಿ ನೆಲ ಕಚ್ಚುತ್ತಿದೆ. ದೆಹಲಿಯಲ್ಲೂ ಇವಾಗ ಬಿಜೆಪಿಗೆ ಗೆಲುವು ಇಲ್ಲ. ಇಲ್ಲಿ ಒಂದು ಸೀಟು ಕಾಂಗ್ರೆಸ್ ಗೆದ್ದಿದೆ ಅಂತಾ ಏನೇನೋ ಡಿಸ್ಟರ್ಬ್ ಮಾಡೋಕೆ ಹೊರಟಿದ್ದಾರೆ. ಬಿಜೆಪಿಯವರು ನೇರವಾಗಿ ಹೇಳದೇ , ಆರ್ ಎಸ್ ಎಸ್ ಮುಂದೆ ಬಿಟ್ಟು ಏನೇನೋ ಮಾಡ್ತಿದ್ದಾರೆ. ಜನರ ಭಾವನೆ ಕೆರಳಿಸಲು ಹೊರಟಿದ್ದಾರೆ ಎಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.

ಫಥ ಸಂಚಲನ ಆದ್ರೂ ಮಾಡಿಕೊಳ್ಳಲಿ ಚೆಡ್ಡಿಯಾದ್ರು ಹಾಕಿಕೊಳ್ಳಲಿ, ಪಂಚೆಯಾದ್ರು ಹಾಕಿಕೊಳ್ಳಲಿ. ಮಾವಿನ ಹಣ್ಣು ಕೆಂಪಗೆ ಇದ್ರೆ ನೋಡ್ತಾರೆ. ಮನುಷ್ಯ ಬೆಳ್ಳಗೆ, ಸ್ಟ್ರಾಂಗ್ ಇದ್ರೆ ನೋಡ್ತಾರೆ. ಪಾಪ ನನ್ನ ತಮ್ಮ ಜನರ ಪರ ಕೆಲಸ ಮಾಡ್ತಿದ್ದಾನೆ. ಆದರೆ ಅದನ್ನು ಸಹಿಸದೇ ಈ ರೀತಿ ತಂತ್ರ ಮಾಡ್ತಿದ್ದಾರೆ. ಇವರು ಏನು ಬೇಕಾದರೂ ಮಾಡಲಿ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ನಮ್ಮ ರಾಜಕೀಯ ಮಾಡ್ತೀವಿ. ಪಥ ಸಂಚಲನ ಆದರೂ ಮಾಡಲಿ, ಉರುಳು ಸೇವೆಯಾದ್ರು ಮಾಡಲಿ, ಎಲ್ಲರಿಗೂ ಕಾವಿಯಾದ್ರು ತೊಡಿಸಲಿ. ಆದರೆ ನಾವು ಯಾವುದಕ್ಕೂ ತಲೆ ಕೆಡೆಸಿಕೊಳ್ಳಲ್ಲ ಎಂದು ಡಿಕೆಶಿಗೆ ಆರ್‌ಎಸ್‌ಎಸ್‌ಗೆ ಟಾಂಗ್ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *