Top

ಅಕ್ಕಿ ತೊಳೆದ ನೀರನ್ನ ತಲೆ ಕೂದಲಿಗೆ ಬಳಸಿದ್ರೆ ಏನಾಗತ್ತೆ ಗೊತ್ತಾ..?

ಅಕ್ಕಿ ತೊಳೆದ ನೀರನ್ನ ತಲೆ ಕೂದಲಿಗೆ ಬಳಸಿದ್ರೆ ಏನಾಗತ್ತೆ ಗೊತ್ತಾ..?
X

ಗಟ್ಟಿ ಮುಟ್ಟಾದ ಸಧೃಡ ಕೂದಲಿಗೆ ತರಹೇವಾರಿ ಎಣ್ಣೆ, ಶ್ಯಾಂಪೂ, ಹೇರ್ ಪ್ಯಾಕ್ ಹಾಕ್ತಾನೇ ಇರ್ತೀವಿ. ಕೂದಲು ಉದುರೋ ಸಮಸ್ಯೆ ಸ್ಟಾರ್ಟ್ ಆಯ್ತು ಅಂದ್ರೆ, ಸಿಕ್ಕ ಸಿಕ್ಕವರ ಬಳಿ ಸಲಹೆ ಪಡೆದು, ಸಾವಿರ ಸಾವಿರ ಮದ್ದು ಮಾಡ್ತೀವಿ. ಟಿವಿಗಳಲ್ಲಿ ಬರೋ ಆ್ಯಡ್‌ಗಳನ್ನ ನೋಡಿ, ಕೆಮಿಕಲ್‌ಯುಕ್ತವಾದ ಪ್ರಾಡಕ್ಟ್‌ಗಳನ್ನೆಲ್ಲ ಬಳಸಿ, ಇದ್ದ ಸ್ವಲ್ಪ ಕೂದಲನ್ನೂ ಕಳೆದುಕೊಳ್ತೀವಿ.

ಇಷ್ಟೆಲ್ಲ ಮಾಡೋ ಬದ್ಲು, ಮನೆಲೇ ಇರೋ, ನಾವು ಪ್ರತಿದಿನ ಬಳಸೋ ವಸ್ತುವಿನಿಂದ ನಿಮ್ಮ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಬಹುದು. ಎಸ್, ಅನ್ನಕ್ಕೆ ಬಳಸೋ ಅಕ್ಕಿ ನಮ್ಮ ಕೂದಲಿನ ಸೌಂದರ್ಯ ಕಾಪಾಡೋದ್ರಲ್ಲಿ ತುಂಬಾ ಸಹಾಯವಾಗತ್ತೆ.

ಇದೇನಿದು, ಕೂದಲಿಗೆ ಕಾಯಿ ಹಾಲು, ಮೆಂತ್ಯ ಪೇಸ್ಟ್, ನೆಲ್ಲಿಕಾಯಿ, ಭ್ರಂಗರಾಜ್, ಶಿಕಾಕಾಯಿ, ಗೋರಂಟಿ ಬಳಸೋದು ಕೇಳಿದ್ವಿ. ಹೊಸದಾಗಿ ಅಕ್ಕಿ ಬಳಸಿ ಕೂದಲು ಕಾಪಾಡಿಕೊಳ್ಳಬಹುದಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗೋದು ಕಾಮನ್. ಆದ್ರೆ ಇದು ಹೊಸ ರೆಮಿಡಿ ಅಲ್ಲ, ಹಳೆಯ ರೆಮಿಡಿ. ಸದ್ಯ ಚಾಲ್ತಿಯಲ್ಲಿದೆ ಅಷ್ಟೇ.

ಏಷ್ಯನ್ ಮಹಿಳೆಯರು ಸಧೃಡ ಕೂದಲಿಗಾಗಿ ಅಕ್ಕಿ ತೊಳೆದ ನೀರನ್ನ ಬಳಸುತ್ತಿದ್ದರಂತೆ. ಹೀಗಾಗಿ ಅವರ ಕೂದಲು ಸಖತ್ ಸಿಲ್ಕಿ ಮತ್ತು ಉದ್ದವಾಗಿತ್ತು. ಆದ್ರೆ ಅಕ್ಕಿ ನೀರನ್ನ ಸರಿಯಾಗಿ ಬಳಸಿದ್ರೆ ಮಾತ್ರ ನೀವು ಇದರ ಲಾಭ ಪಡೆಯಬಹುದು. ಹಾಗಾದ್ರೆ ಅಕ್ಕಿ ನೀರನ್ನ ಹೇಗೆ ಬಳಸೋದು ಅನ್ನೋದನ್ನ ತಿಳಿಯೋಣ ಬನ್ನಿ.

ಎರಡು ದೊಡ್ಡ ಸ್ಪೂನ್ ಅಕ್ಕಿಗೆ ನೀರು ಹಾಕಿ ಒಮ್ಮೆ ಸ್ವಚ್ಛವಾಗಿ ತೊಳೆಯಿರಿ. ನಂತರ ಹಳೆ ನೀರನ್ನ ಬಿಸಾಕಿ, ಅದಕ್ಕೆ ಅರ್ಧ ಲೋಟ ನೀರು ಹಾಕಿ 24ಗಂಟೆ ನೆನೆಯಲು ಬಿಡಿ. ಹೀಗೆ ನನೆಯಲು ಬಿಟ್ಟ ಅಕ್ಕಿ ನೀರು ಫರ್ಮೆಂಟೆಡ್ ರೈಸ್ ವಾಟರ್ ಆಗಿ ಮಾರ್ಪಾಡಾಗುತ್ತದೆ.

ಈಗ ಒಂದು ಚಮಚದ ಸಹಾಯದಿಂದ ಈ ಮಿಶ್ರಣವನ್ನು ಚೆನ್ನಾಗಿ ಕದಡಿ, ಅಕ್ಕಿ ಸೋಸಿ ನೀರನ್ನಷ್ಟೇ ಚಿಕ್ಕ ಸ್ಪ್ರೇ ಬಾಟಲ್‌ಗೆ ಹಾಕಿಡಿ. ಆ ಸ್ಪ್ರೇ ಬಾಟಲನ್ನು 10 ನಿಮಿಷಗಳ ಕಾಲ ಫ್ರಿಜ್‌ನಲ್ಲಿರಿಸಿ ತೆಗಿಯಿರಿ. ಹೀಗೆ ಮಾಡುವುದರಿಂದ ಅಕ್ಕಿ ನೀರಿನಲ್ಲಿದ್ದ ವಾಸನೆ ಕಡಿಮೆಯಾಗುತ್ತದೆ.

ಈಗ ಈ ಸ್ಪ್ರೇಬಾಟಲ್‌ನಿಂದ ನಿಮ್ಮ ಕೂದಲಿಗೆ ಫರ್ಮೆಂಟೆಡ್ ರೈಸ್ ವಾಟರನ್ನ ಸ್ಪ್ರೇ ಮಾಡಿಕೊಳ್ಳಿ. ಬುಡದಿಂದ ತುದಿಯವರೆಗೂ ನೀರು ತಾಗುವಂತೆ ಸ್ಪ್ರೇ ಮಾಡಿಕೊಳ್ಳಿ. 20 ನಿಮಿಷ ಹಾಗೆ ಬಿಡಿ. ನಂತರ 5 ನಿಮಿಷ ನಿಧಾನಕ್ಕೆ ಮಸಾಜ್ ಮಾಡಿಕೊಂಡು, ಉಗುರು ಬೆಚ್ಚು ನೀರಿನಲ್ಲಿ ತಲೆ ಸ್ನಾನ ಮಾಡಿ. ಆದಷ್ಟು ಕೆಮಿಕಲ್‌ಯುಕ್ತ ಶ್ಯಾಂಪು ಬಳಸೋದನ್ನ ಕಡಿಮೆ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಈ ಟಿಪ್ಸ್ ಪ್ರಯೋಗಿಸಿದ್ರೆ ಒಳ್ಳೆಯ ಫಲಿತಾಂಶ ಕಂಡುಕೊಳ್ಳಬಹುದು.

Next Story

RELATED STORIES