‘ಹೊಸ ಯೋಜನೆಯಂತೂ ಇವರು ಮಾಡ್ತಿಲ್ಲ. ನಾವು ಕೊಟ್ಟ ಯೋಜನೆಗಳಿಗೂ ಹಣ ನೀಡ್ತಿಲ್ಲ’

ಕೋಲಾರ: ಕೋಲಾರದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ಬ್ರೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರ ಹೊರಹಾಕಿದ್ದಾರೆ.

ಹಿಂದೆ ನಾನೇ ಕೋಚ್ ಫ್ಯಾಕ್ಟರಿಗೆ ಒಪ್ಪಿಗೆ ಕೊಡಿಸಿದ್ದೆ. ಫ್ಯಾಕ್ಟರಿಗೆ ಅಪ್ರೂವಲ್ ಕೂಡ ಒತ್ತಡ ತಂದು ಮಾಡಿಸಿದ್ದೆ. ನಾನೇ ಅಲ್ಲಿದ್ದ ಕಾರಣ ಅಪ್ರೂವಲ್ ಆಗಿತ್ತು. ಗದಗ- ವಾಡಿ ಜೋಡಿ ಮಾರ್ಗದ ಹಸಿರು ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೂ ಹೋಗದೆ ಈ ಕಾರ್ಯಕ್ರಮ ಅಟೆಂಡ್ ಮಾಡಿದ್ದೆ. ಆದರೆ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಗಿತ ಅನ್ನೋದನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ.

ಕೇಂದ್ರ ಸರ್ಕಾರ ಯಾಕೆ ಹಾಗೆ ಮಾಡ್ತಿದೆಯೋ ಗೊತ್ತಿಲ್ಲ. ರೈಲ್ವೆ ಮಿನಿಸ್ಟರ್ ಆಗಿದ್ದಾಗ ಹಲವು ಯೋಜನೆ ರಾಜ್ಯಕ್ಕೆ ತಂದಿದ್ದೆ. ನಾವು ಯಾವತ್ತೂ ಪ್ರಚಾರ ಬಯಸಲಿಲ್ಲ. ಆದರೆ ಈಗ ನಾವು ಮಾಡಿರುವ ಯೋಜನೆಯನ್ನೇ ಬ್ರೇಕ್ ಮಾಡೋಕೆ ಹೊರಟಿದ್ದಾರೆ. ಏರ್ ಪೋರ್ಟ್ ಉದ್ಘಾಟನೆಗೂ ನನ್ನನ್ನ ಕರ್ಟಸಿಗೂ ಕರೆಯಲಿಲ್ಲ. ಕೇಂದ್ರದಲ್ಲಿ ಗಡ್ಕರಿ ಮಾತ್ರ ಕೆಲಸ ಮಾಡ್ತಿದ್ದಾರೆ. ರಾಜ್ಯದ ಯೋಜನೆಗಳಿಗೆ ಅವಕಾಶ ನೀಡ್ತಾರೆ. ಆದರೆ ಅವರ ಮೇಲೂ ಒತ್ತಡ ತರುವ ಕೆಲಸ ಮಾಡ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಸಬರಬನ್ ಟ್ರೈನ್ ತಂದಿದ್ದಾರೆ ಆದರೆ ಒಂದು ಕೋಟಿ ಮಾತ್ರ ರಿಲೀಸ್ ಮಾಡಿದ್ದಾರೆ. ಅವರು ಕೊಟ್ಟ ೧ ಕೋಟಿ ಸರ್ವೆಗೂ ಸಾಕಾಗಲ್ಲ. ಹೊಸ ಯೋಜನೆಯಂತೂ ಇವರು ಮಾಡ್ತಿಲ್ಲ. ನಾವು ಕೊಟ್ಟ ಯೋಜನೆಗಳಿಗೂ ಹಣ ನೀಡ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ಹೊರಹಾಕಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *