‘ಸಿಎಂ ಓರ್ವ ಅನುಭವಿ ರೈತ, ಅವರಿಗೆ ಕಳ್ಳೆತ್ತು ಯಾವ್ದು, ದುಡಿಯೋ ಎತ್ತು ಯಾವ್ದು ಅಂತಾ ಗೊತ್ತು’

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್‌ವೈ ಓರ್ವ ಅನುಭವಿ ರೈತ. ರೈತನಿಗೆ ದುಡಿಯುವ ಎತ್ತು ಯಾವುದು. ಸಿಎಂಗೆ ಕಳ್ಳೆತ್ತು ಯಾವುದು ಅಂತಾ ಗೊತ್ತಿರುತ್ತೆ. ದುಡಿಯೋ ಎತ್ತಿಗೆ ಚೆನ್ನಾಗಿ ಕೆಲಸ ಕೊಡುತ್ತಾರೆ. ಚೆನ್ನಾಗಿ ಮೇವು ಹಾಕಿದ್ರೆ ಹೆಚ್ಚು ಕಾಲ ದುಡಿಯುತ್ತೆ. ಕಳ್ಳೆತ್ತಿಗೆ ಏನೂ ಕೊಟ್ರು ನೊಗ ಹಾಕಿದ್ರೆ ಸೈಡ್‌ಗೆ ಎಳೆದು ಕೊಂಡು ಹೋಗಿ ನಿಲ್ಲುತ್ತೆ. ದುಡಿಯೋ ಎತ್ತಿಗೆ ಹೆಚ್ಚು ಕೆಲಸಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಕಗ್ಗಂಟ್ಟು ಅಂತಾ ಯಾವುದು ಇಲ್ಲ ,ಪ್ರಶ್ನೆಯೇ ಇಲ್ಲ. ನೂತನ ಸಚಿವರೊಂದಿಗೆ ಸಮಾಲೋಚನೆ ಮಾಡಿ, ಮುಖ್ಯಮಂತ್ರಿ ತಿರ್ಮಾನ ಮಾಡ್ತಾರೆ. ನನಗೆ ಯಾವ ಖಾತೆ ಕೊಟ್ರು ಚೆನ್ನಾಗಿ ಕೆಲಸ ಮಾಡ್ತೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *