ಸೆನೆಟ್​ ಮತದಾನದಲ್ಲಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ಗೆ ಜಯ

ವಾಷಿಂಗ್ಟನ್: ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕಾ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಿದ್ದ ವಾದಕ್ಕೆ ಸೋಲಾಗಿದೆ. ಅಷ್ಟೇ ಅಲ್ಲದೆ, ಟ್ರಂಪ್ ಅವರು ದೋಷಾರೋಪದಿಂದ ಖುಲಾಸೆಗೊಂಡ ಹಿನ್ನೆಲೆಯಲ್ಲಿ ಆರೋಪ ಮಾಡಿದವರಿಗೆ ತೀವ್ರ ಮುಖಭಂಗ ಎದುರಿಸುವಂತಾಗಿದೆ.

ಅಧಿಕಾರ ದುರುಪಯೋಗ ಮತ್ತು ಸಂಸತ್ ತನಿಖೆಗೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಟ್ರಂಪ್​ ವಿರುದ್ಧ ಡೆಮಾಕ್ರೆಟಿಕ್ ಪಕ್ಷ ವಾದ ಮಂಡಿಸಿತ್ತು. ಹೀಗಾಗಿ ಈ ವಿಷಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸೆನೆಟ್​ನಲ್ಲಿ ವಿಚಾರಣೆಗೆ ಬಂದಿತ್ತು.  ಡೊನಾಲ್ಡ್ ಟ್ರಂಪ್ ಅವರ ಕಾನೂನು ತಂಡ, ಅಧ್ಯಕ್ಷಕರು ಯಾವುದೇ ತಪ್ಪನ್ನೂ ಮಾಡಿಲ್ಲ ಎಂಬುದನ್ನು ಸಮರ್ಥಿಸಿಕೊಂಡಿದ್ದು, ಜೊತೆಗೆ ಡೆಮಾಕ್ರೆಟಿಕ್ ಪಕ್ಷದ ವಾದ ಮತ್ತು ಆರೋಪ ದುರ್ಬಲದಿಂದ ಕೂಡಿದೆ. ಇದು ಸಂವಿಧಾನದ ಅಪಾಯದ ಕೃತ್ಯ ಎಂದು ಪ್ರತಿಪಾದಿಸಿದರು. ಇದರಂತೆ ಆ ವಾದನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು.

ತದನಂತರ ಟ್ರಂಪ್ ವಿರುದ್ಧ ಕೇಳಿ ಬಂದ ಅಧಿಕಾರ ದುರುಪಯೋಗ ಆರೋಪದಿಂದ ಮುಕ್ತಗೊಳಿಸಲು ಮತದಾನ ನಡೆಯಿತು. ಈ ವೇಳೆ ಟ್ರಂಪ್ ಪರವಾಗಿ 52 ವೋಟುಗಳು ಬಿದ್ದರೆ, ಅವರ ವಿರುದ್ಧವಾಗಿ 48 ವೋಟುಗಳಷ್ಟೇ ಬಂದಿದ್ದವು. ಈ ಮೂಲಕ ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದಿರು. ಈ ಮೂಲಕ ಅಮೆರಿಕಾದ ಇತಿಹಾಸದಲ್ಲಿಯೇ ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *