ನೀವೇನು ಹರಿಶ್ಚಂದ್ರನ ಮೊಮ್ಮಕ್ಕಳಾ? ಅನ್ನೋದು ಗೊತ್ತಿದೆ ನಮಗೆ – ಶಿವಲಿಂಗೇಗೌಡ

ಹಾಸನ:  ಅರಣ್ಯ ಇಲಾಖೆ ಅಧಿಕಾರಿಗಳಿಂದ ದೇಶದ ಅಭಿವೃದ್ಧಿ ಹಾಳಾಗಿದೆ ಎಂದು  ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲವಾಗಿರುವ ಘಟನೆ ನಡೆದಿದೆ.

ನಿನ್ನೆ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,  ಎತ್ತಿನ ಹೊಳೆ ಯೋಜನೆಯ ಪ್ರಗತಿ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಯ್ತು,ನೀರಾವರಿ ಯೋಜನೆಗೆ ಅರಣ್ಯ ಇಲಾಖೆಯ ಕೆಲವೊಂದು ನಿಯಮ ಅಡ್ಡಿಯಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಇನ್ನೂ ಈ ವೇಳೆ ತಮ್ಮ ಮೇಲೆ ಬಂದ ಆರೋಪಕ್ಕೆ ಸಮಜಾಯಿಸಿ ನೀಡಲು ಕೂಡ ಅರಣ್ಯ ಇಲಾಖೆ ಅಧಿಕಾರಿ ಮುಂದಾದರು.

ಅರಣ್ಯ ಇಲಾಖೆ ಅಧಿಕಾರಿ ಮಾತನಾಡಲು ಮುಂದಾಗುತ್ತಿದ್ದಂತೆ ಕೆಂಡಾಮಂಡಲರಾದ ಶಾಸಕ ಶಿವಲಿಂಗೇಗೌಡ, ನೀವೇನು ಹರಿಶ್ಚಂದ್ರನ ಮೊಮ್ಮಕ್ಕಳ ಅನ್ನೋದು ಗೊತ್ತಿದೆ.  ನಮಗೆ ನಿಮ್ಮ ದೆಸೆಯಿಂದ ಈ ದೇಶದಲ್ಲಿ ಒಂದೇ ಒಂದು ಪ್ರಾಜೆಕ್ಟ್ ಆಗುತ್ತಿಲ್ಲ. ನೀವು ಸಣ್ಣಪುಟ್ಟದ್ದಕ್ಕೆಲ್ಲ ರೈಡ್ ಮಾಡ್ತೀರ, ನಿಮಗೆ ಬದಲಿ ಜಾಗಕೊಟ್ಟಿಲ್ಲವ ಎಂದು ಕಿಡಿಕಾರಿದರು.

ನಮ್ಮಲ್ಲಿ ಆರು ಟಿಎಂಸಿ ನೀರು ಹರಿದು ಮಾರಿ ಕಣಿವೆ ಸೇರುತ್ತಿದೆ. ಅಲ್ಲಿ ನೀವೆ ಒಂದು ಚೆಕ್ ಡ್ಯಾಂ ಕಟ್ಟಿ ಎಂದು ಇವರ ಬಳಿ ಕಾಲು ಹಿಡಿಯೋದು ಒಂದು ಬಾಕಿ,  ಪಾರ್ಲಿಮೆಂಟ್ ಅಲ್ಲಿ ಯಾರು ಮಾತನಾಡ್ತಾರೋ ಇಲ್ಲವೋ ಗೊತ್ತಿಲ್ಲ. ಅಂತರ್ಜಲ ಕಡಿಮೆಯಾಗೋದೆ ನಿಮ್ಮಿಂದ. ಬರೀ ನೀಲಗಿರಿ ಬೆಳೆಸಿಕೊಂಡು ನಿಂತಿದ್ದೀರಿ ಎಂದು ಆಕ್ರೋಶಗೊಂಡರು ಇನ್ನೂ ಇದೇ ವೇಳೆ ಶಾಸಕ ಶಿವಲಿಂಗೇಗೌಡ ಮಾತಿಗೆ  ಮಾಜಿ ಸಚಿವ ರೇವಣ್ಣ, ಎಂಎಲ್​​ಸಿ ಗೋಪಾಲಸ್ವಾಮಿ, ಶಾಸಕ ಬಾಲಕೃಷ್ಣ ಧ್ವನಿಗೂಡಿಸಿದರು.

Recommended For You

About the Author: user

Leave a Reply

Your email address will not be published. Required fields are marked *