ಕುಮಾರಸ್ವಾಮಿ ಅವರ ರಕ್ಷಣೆ ನಮ್ಮ ಆದ್ಯತೆ – ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಏನು ಭದ್ರತೆ ಕೊಡಬೇಕು ಕೊಟ್ಟಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಬೆದರಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಜೀವ ಬೆದರಿಕೆ ಬಗ್ಗೆ ವಿವರ ಕೊಟ್ಟರೆ ತನಿಖೆ ಮಾಡಿಸಲಾಗುವುದು. ಅವರ ರಕ್ಷಣೆ ನಮ್ಮ ಆದ್ಯತೆ,  ಹೆಚ್ಚಿನ ರಕ್ಷಣೆಗಯನ್ನು ಸರ್ಕಾರ ಒದಗಿಸಿಕೊಡುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸದ್ಯ  ಬಿಜೆಪಿ ಸಂಚು ಮಾಡ್ತಿದೆ ಎಂಬ ಆರೋಪಕ್ಕೆ ದಯವಿಟ್ಟು ಈ ಬಗ್ಗೆ ಕುಮಾರಸ್ವಾಮಿ ವಿವರ ಕೊಡಬೇಕು.  ಈ ಬಗ್ಗೆ ಗೃಹ ಸಚಿವನಾಗಿ ನಾನು ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ,  ದಯವಿಟ್ಟು ಇದರ ಬಗ್ಗೆ ವಿವರ ನೀಡುವಂತೆ ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಕೃಷ್ಣಾದಲ್ಲಿ  ಮಾತನಾಡಿದರು.

 

Recommended For You

About the Author: user

Leave a Reply

Your email address will not be published. Required fields are marked *