ಸ್ಪೋಟಕ ಸಿಡಿದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಹ್ಯಾರಿಸ್..!

ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನ ವನ್ನಾರ್ಪೇಟೆ ಬಳಿ ಎಂಜಿಆರ್​​ ಹುಟ್ಟಿದಹಬ್ಬದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕೆ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್​ರೇ ಮುಖ್ಯ ಅತಿಥಿ. ಕಾರ್ಯಕ್ರಮ ಉತ್ತುಂಗಕ್ಕೇರಿದ್ದಾಗ ಸ್ಥಳೀಯರು ಪಟಾಕಿ ಹೊತ್ತಿಸಿದ್ದರು. ಸ್ಕೈ ಶಾಟ್ಸ್​ ಸಿಡಿಸಿದಾಗ ಕೆಲವೊಂದು ಗಾಳಿಯಲ್ಲಿ ಸಿಡಿಯದೇ ಕೆಳಕ್ಕೆ ಬಿದ್ದಿದೆ.

ಅಂತಹ ಕೆಲವಲ್ಲಿ ಒಂದು ಹ್ಯಾರಿಸ್ ಕಾಲ ಬಳಿ ಬಿದ್ದಿತ್ತು. ಇದನ್ನು ನೋಡದೇ ಹತ್ತಿರಕ್ಕೆ ಹೋದಾಗ ದೊಡ್ಡ ಶಬ್ದ ಮತ್ತು ಹೊಗೆಯೊಂದಿಗೆ ಸ್ಫೋಟವಾಗಿದೆ. ಎಂಎಲ್​​ಎ ಹ್ಯಾರಿಸ್ ಮತ್ತು ಜತೆಗಿದ್ದ ಐದಾರು ಜನರಿಗೆ ಗಾಯಗಳಾಗಿತ್ತು. ಕೂಡಲೇ ಅವರೆಲ್ಲರನ್ನೂ ಹತ್ತಿರದಲ್ಲೇ ಇದ್ದ ಸೈಂಟ್ ಫಿಲೋಮಿನಾಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು.

ಮೊನ್ನೆ ರಾತ್ರಿಯೇ ಡಿಸ್ಚಾರ್ಜ್ ಆಗ್ತಾರೆ ಅಂತ ಹೇಳಿದ್ರೂ, ಕಿವಿಯಲ್ಲಿ ಬ್ಲಡ್ ಕ್ಲಾಟ್ ಆಗಿದ್ದ ಕಾರಣ ಇ ಅಂಡ್ ಟಿ ತಜ್ಞರು ಬಂದು ತಪಾಸಣೆ ಮಾಡುವವರೆಗೂ ಆಸ್ಪತ್ರೆಯಲ್ಲೇ ವಿರಮಿಸಿ ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆಗೆ ಡಿಸ್ಚಾರ್ಜ್ ಆದರು. ಈ ವೇಳೆ ಮಾತನಾಡಿದ ಹ್ಯಾರಿಸ್ ಸಿಡಿದದ್ದು ಪಟಾಕಿಯಲ್ಲ, ಜೀವಹಾನಿ ಮಾಡಲೆಂದೇ ಮಾಡಿರುವ ಕೃತ್ಯವೆಂದು  ಅನುಮಾನ ವ್ಯಕ್ತಪಡಿಸಿದರು.

ಕಳೆದ ರಾತ್ರಿ ಘಟನೆ ಆದ ಕೂಡಲೇ ಅಶೋಕ್ ನಗರ ಮತ್ತು ವಿವೇಕ್ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ರು. ಜತೆಗೆ ಬಾಂಬ್ ಸ್ಕ್ವಾಡ್ ಮತ್ತು ಎಫ್​ಎಸ್​ಎಲ್​ ತಜ್ಞರೂ ಬಂದು ತಪಾಸಣೆ ಮಾಡಿದರು. ವಿಧಿ ವಿಜ್ಞಾನ ತಜ್ಞರೂ ಮೇಲ್ನೋಟಕ್ಕೆ ಇದು ಪಟಾಕಿಯಿಂದ ಆಗಿರುವ ಸ್ಫೋಟ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಆಸ್ಪತ್ರೆಗೆ ಆಗಮಿಸಿ ಹ್ಯಾರಿಸ್ ಆರೋಗ್ಯ ವಿಚಾರಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಶಾಸಕ ರಾಮಲಿಂಗಾರೆಡ್ಡಿ ಇದು ಆಕಸ್ಮಿಕವಲ್ಲ, ಬೇಕಂತಲೇ ಯಾರೋ ಈ ಕೃತ್ಯ ಎಸಗಿದ್ದಾರೆ. ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದರು.

ಪ್ರಕರಣ ದಾಖಲಿಸಿಕೊಂಡಿರೋ ವಿವೇಕನಗರ ಪೊಲೀಸರು ರಾತ್ರಿ  ಕಾರ್ಯಕ್ರಮದ ಆಯೋಜಕರನ್ನು ಕರೆಸಿ ವಿಚಾರಣೆ ಮಾಡ್ತಿದ್ದಾರೆ. ಮತ್ತೊಂದೆಡೆ FSL ಸಿಬ್ಬಂದಿ ಸ್ಫೋಟಕದ ಅವಶೇಷಗಳನ್ನ ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.

ಹೀಗಾಗಿ, ವರದಿ ಬಂದ ಬಳಿಕ ಸ್ಫೋಟಕದ ಅಸಲಿಯತ್ತೇನು ಅನ್ನೋದು ಗೊತ್ತಾಗಲಿದೆ. ಮತ್ತೊಂದೆಡೆ ಘಟನೆ ಬಗ್ಗೆ ಗಂಭೀರವಾಗಿ ಪರಿಗಣಿಸಿರೋ ಪೊಲೀಸರ ಸಹ ಬೇರೆಯದ್ದೇ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *