ಬಿಎಸ್‌ವೈ ಜೆಡಿಎಸ್​ಗೆ ಸೇರ ಬಯಸಿದ್ದರು – ಹೆಚ್‌. ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ವಿಧಾನಸಭೆ ಉಪಚುನಾವಣೆ ಬಳಿಕ ಜೆಡಿಎಸ್​ ಎಲ್ಲೂ ಪಕ್ಷ ಸಂಘಟನೆಗೆ ಕೈ ಹಾಕಿರಲಿಲ್ಲ. ಕಾರ್ಯಕರ್ತರಲ್ಲೂ ಹುಮ್ಮಸ್ಸು ಕುಗ್ಗಿ ಹೋಗಿತ್ತು. ಇದೀಗ ಎಲ್ಲ ರಾಜಕೀಯ ಪಕ್ಷಗಳಿಗಿಂತಲೂ ಮೊದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುತ್ತಿದೆ.

ಇವತ್ತು ಅರಮನೆ ಮೈದಾನದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಮಾಜಿ ಸಚಿವರು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಗೆದ್ದ-ಸೋತ ಮುಖಂಡರ ಸಭೆ ಕರೆಯಲಾಗಿತ್ತು. ಈ ವೇಳೆ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಯ್ತು. ಇಷ್ಟು ಮಾತ್ರವಲ್ಲ ಜೆಡಿಎಸ್​ ಬಲವರ್ಧನೆಗೆ ಕಾರ್ಯಕರ್ತರು ಏನೆಲ್ಲ ಮಾಡಬೇಕು ಅಂತ ಕುಮಾರಸ್ವಾಮಿ ಹೇಳಿದರು. ಮಾತಿನುದ್ದಕ್ಕೂ ಬಿಜೆಪಿ ನಾಯಕರಿಗೆ ಚಾಟಿಯೇಟು ನೀಡಿದರು.

ಸಂಸದೆ ಶೋಭಾ ಕರಂದ್ಲಾಜೆ ಟ್ವೀಟಿಗೆ ಎದಿರೇಟು ನೀಡಿದ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ರಾಮಚಂದ್ರೇಗೌಡರು ನಮ್ಮ ಮನೆ ಬಾಗಿಲಿಗೆ ಬಂದಿದರು. ಮಂತ್ರಿ ಮಾಡಿ ಜೆಡಿಎಸ್​ ಸೇರುತ್ತೇವೆ ಅಂದಿದರು. ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರದಿಂದಿರಿ ಅಂತ ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾತನಾಡಿದ ದೇವೇಗೌಡರು ಪೌರತ್ವ ಕಾಯ್ದೆ ವಿರುದ್ಧ ಹರಿಹಾಯ್ದರು. ದೇಶದಲ್ಲಿ 40 ಕೋಟಿ ಮುಸ್ಲಿಮರಿದ್ದಾರೆ. ಅವರನ್ನು ಎಲ್ಲಿಗೆ ಕಳಿಸುತ್ತೀರಿ ಅಂತ ನಾನೂ ನೋಡ್ತೇನೆ. ನಾನು ಗೆಲ್ಲದೇ ಹೋಗಬಹುದು. ಆದರೆ ಎಂದಿಗೂ ಹೋರಾಟ ಮಾಡುತ್ತೇನೆ. ಕರುಣಾನಿಧಿ ವೀಲ್​ ಚೇರ್​ನಲ್ಲಿ ಬಂದು ಪಕ್ಷ ಸಂಘಟನೆ ಮಾಡುತ್ತಿದರು. ನಾನೂ ಹಾಗೆ ಜೀವನಪರ್ಯಂತ ಹೋರಾಟ ಮಾಡ್ತೇನೆ ಅಂತ ಹೇಳಿದರು.

ಒಟ್ಟಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಮೊದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗ್ತಿದೆ. ಇದರ ಜೊತೆಗೆ ಬಿಜೆಪಿ ವಿರುದ್ಧ ತೊಡೆತಟ್ಟುತ್ತಲೇ ಇರುತ್ತೇವೆ ಅಂತಲೂ ಸವಾಲೂ ಹಾಕಿದೆ.

Recommended For You

About the Author: user

Leave a Reply

Your email address will not be published. Required fields are marked *