ಬರ್ತ್‌ಡೇ ಪಾರ್ಟಿಯಲ್ಲಿ ಅವಘಡ: ಅನುಮಾನಾಸ್ಪದ ವಸ್ತು ಸ್ಪೋಟ..?, ಶಾಸಕ ಹ್ಯಾರಿಸ್‌ಗೆ ಗಾಯ..!

ಬೆಂಗಳೂರು: ನಿನ್ನೆ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಭಾಗವಹಿಸಿದ್ದು, ರಾಕೇಟ್ ಪಟಾಕಿ ಸಿಡಿಸಿದ ಕಾರಣ ಹ್ಯಾರಿಸ್ ಕಾಲಿಗೆ ಗಾಯವಾಗಿದ್ದು, ಸೆಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಪೋಟ ಸಂಭವಿಸಿದಾಗ ಜನರು ಅದನ್ನು ಸ್ಪೋಟಕ ಎಂದು ಭಾವಿಸಿದ್ದರು. ತದನಂತರ ಕೆಲ ಹೊತ್ತಿನ ಬಳಿಕ ಅದು ರಾಕೇಟ್ ಪಟಾಕಿ ಎಂದು ತಿಳಿದು ಬಂದಿದೆ. ಕಟ್ಟಡದ ಮೇಲೆ ಹಚ್ಚಿದ್ದ ಪಟಾಕಿ ನೇರವಾಗಿ ದಿಕ್ಕುಬದಲಿಸಿ ಸ್ಟೇಜ್ ಬಳಿ ಧಾವಿಸಿತ್ತು. ಸ್ಟೇಜ್ ಮೇಲೆ ಕೂತಿದ್ದ ಹ್ಯಾರಿಸ್ ಮೇಲೆ ಪಟಾಕಿಯ ಸಿಡಿತಲೆ ಸಿಡಿದಿತ್ತು. ಇದರಿಂದ ಕಾಲಿನ ಭಾಗಕ್ಕೆ ಸುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ಇದೆ.

ಘಟನೆ ಬಗ್ಗೆ ಹ್ಯಾರಿಸ್ ಪುತ್ರ ನಲಪಾಡ್ ಮಾತನಾಡಿದ್ದು, ವನ್ನಾರಪೇಟೆಯಲ್ಲಿ ಎಂಜಿಆರ್ ಬರ್ತ್‌ಡೇ ಕಾರ್ಯಕ್ರಮ ಮಾಡಿದ್ರು. ಆ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ನಮ್ಮ ತಂದೆಯವರನ್ನು ಕರೆದಿದ್ರು. ನಮ್ಮ ತಂದೆಯವರಿಗಾಗಿಯೇ ಒಂದು ಚೇರ್ ಮೀಸಲಿಡಲಾಗಿತ್ತು. ಆದರೆ, ನಮ್ಮ ತಂದೆ ಪಕ್ಕದ ಬೇರೊಂದು ಚೇರ್ನಲ್ಲಿ ಕುಳಿತಿದ್ರು. ಕುಳಿತುಕೊಂಡ ಸಂದರ್ಭದಲ್ಲಿ ಮೇಲಿಂದ ಹಾರಿಬಂದ ವಸ್ತು ಸಿಡಿಯಿತು. ಪಟಾಕಿ ಮಾದರಿಯ ವಸ್ತುವೊಂದು ಬಂದು ಸಿಡಿತಗೊಂಡಿತು ಎಂದರು.

ಅಲ್ಲದೇ, ಈ ವೇಳೆ ನಮ್ಮ ತಂದೆಯ ಕಾಲಿಗೆ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ವೈದ್ಯರು 2 ಗಂಟೆ ಕಾಲ ಅಬ್ಸರ್ವೇಷನ್ನಲ್ಲಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ನಮ್ಮ ತಂದೆಯವರಿಗೆ ಚಿಕಿತ್ಸೆ ಮುಂದುವರಿದಿದೆ. ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿರುವ ಸಂಶಯವಿದೆ. ಇಷ್ಟು ವರ್ಷಗಳ ಕಾಲದಲ್ಲಿ ಈ ರೀತಿ ಎಂದೂ ಸಂಭವಿಸಿರಲಿಲ್ಲ. ಘಟನೆ ಕುರಿತು ವಿವೇಕನಗರ, ಅಶೋಕನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

ಶಾಕ್‌ನಲ್ಲಿ ನಮಗೇನು ಅರ್ಥ ಆಗಿಲ್ಲ. ಇದು ಪಟಾಕಿಯಿಂದ ಆಗಿದ್ದು ಅಂತ ಮಾಧ್ಯಮಗಳಲ್ಲಿ ಬರುತ್ತಿದೆ. ಸಿಡಿದಿದ್ದು ಪಟಾಕಿಯೇ ಆಗಿರಲಿ ಅಂತ ನಮ್ಮ ಬಯಕೆ . ನಾವು ಕೂಡ ಅನೇಕ ಪಟಾಕಿ ಸಿಡಿಸಿದ್ದೇವೆ . ಆದರೆ ಎರಡು ನಿಮಿಷ ಮೇಲೆ ಹೋಗಿ ಬಂದು ಸಿಡಿದ ಉದಾಹರಣೆ ಇಲ್ಲ. ಆದರೆ ಇದು ಉದ್ದೇಶ ಪೂರ್ವಕ ಕೃತ್ಯ ಎಂದು ಅನಿಸುತ್ತಿದೆ. ಒಂದು ವೇಳೆ ಚೇರ್ ಬದಲಾವಣೆ ಆಗಿಲ್ಲವಾದ್ರೆ ದುರಂತ ನಡೆಯುವ ಸಾಧ್ಯತೆ ಇತ್ತು . ಬದಲಾವಣೆ ಆಗಿದ್ದರಿಂದ ಏನೂ ಅನಾಹುತ ಆಗಿಲ್ಲ. ನಮಗೆ ಪೂರ್ಣ ಭದ್ರತೆ ಬೇಕಿದೆ. ಅಪ್ಪನಿಗೆ ಅಪಾಯವೇನಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಕ್ಷೇತ್ರದ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಅವರೇ ಬಂದು ಮಾತನಾಡುತ್ತಾರೆ. ನಮಗೆ ಯಾರ ಮೇಲೂ ಸಂಶಯವಿದೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಇಂತಹ ಘಟನೆ ಈವರೆಗೂ ನಡೆದೇ ಇಲ್ಲ ಎಂದಿದ್ದಾರೆ.

ಸ್ಥಳಕ್ಕೆ ಭೇಟಿ ಕೊಟ್ಟ ರಿಜ್ವಾನ್ ಅರ್ಷದ್, ಈಗಾಗಲೇ ಹ್ಯಾರಿಸ್‌ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಪಟಾಕಿ ಸ್ಪೋಟಿಸಿ ಘಟನೆ ನಡೆದಿರುವುದು ಬೆಳಕಿಗೆ ಬಂತು. ಹೀಗಾಗಿ ಆಸ್ಪತ್ರೆ ಬಳಿ ಬಂದೆ. ಪೊಲೀಸರು ಈ ಕುರಿತು ಸಮಗ್ರ ತನಿಖೆ ಮಾಡಬೇಕು. ಈ ಹಿಂದೆ ತನ್ವೀರ್‌ ಸೇಠ್‌ಗೂ ಕೂಡ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಅಟ್ಯಾಕ್ ಆಗಿತ್ತು. ಸದ್ಯ ಘಟನೆ ನಡೆದ ವೇಳೆ ಸ್ಥಳದಲ್ಲಿ ನಾನು ಇಲ್ಲದಿದ್ದರಿಂದ ನನಗೆ ಈ ಬಗ್ಗೆ ಮಾಹಿತಿ ಅಷ್ಟೊಂದು ಗೊತ್ತಿಲ್ಲ. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿಕೆ ನೀಡಿದ್ದು, ಶಾಸಕ ಹ್ಯಾರೀಸ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಈಗ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಗಂಭೀರ ಗಾಯಗಳಾಗಿಲ್ಲ. ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *