‘ರಮೇಶ್ ಜಾರಕಿಹೊಳಿ ಮಂತ್ರಿಯಾದ್ರೂ ಅವರ ಅಳಿಯನೇ ಕೆಲಸ ಮಾಡೋದು’

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮಂತ್ರಿ ಮಂಡಲ ವಿಸ್ತರಣೆ, ಖಾತೆ ಹಂಚಿಕೆಯಾಗಿ ಕೆಲಸ ಶುರುವಾದರೆ ಸರಕಾರ ಟೆಕಾಫ್ ಆಗಿದೆಯಂತ ಹೇಳಬಹುದು. ಆದ್ರೆ ಸಮಸ್ಯೆಗಳನ್ನು ಬಗ್ಗೆ ಹರಿಸೋದ್ರಲ್ಲೆ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ.

ಸರ್ಕಾರ ಬೀಳಿಸೋವಾಗ ಇದ್ದ ಪ್ರೀತಿ ಈಗಿಲ್ವಾ ಎಂಬ ಪ್ರಶ್ನೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸತೀಶ್, ಸಹಜವಾಗಿಯೇ ಪ್ರೀತಿ ಕಡಿಮೆಯಾಗುತ್ತೆ. ಯಾವುದೇ ಒಂದು ವಸ್ತುವಿನ ಮೇಲೆ ಮೊದಲಿದ್ದ ಪ್ರೀತಿ ಬೇರೆ ಬೇರೆ ಕಾರಣಗಳಿಂದ ಕಡಿಮೆಯಾಗುತ್ತೆ. ಮೊದಲಿನ ಸ್ಪೀಡ್ ಕೊನೆಯವರೆಗೆ ಇರಲ್ಲ ಎಂದಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನ ಹೊರ ಬಿದ್ದೆ ಬೀಳುತ್ತೆ, ಎಲ್ಲರಿಗೂ ಕೊಡೊಕ್ಕಾಗಲ್ಲ. ಕತ್ತಿ, ಅಭಯ್ ಪಾಟೀಲ್, ಆನಂದ್ ಮಾಮನಿ ಸೇರಿದಂತೆ ಅನೇಕರು ಸಚಿವ ಸ್ಥಾನ ಕೇಳೆ ಕೇಳ್ತಾರೆ. ಸವದಿಗೆ ಎಂ.ಎಲ್.ಎ ಅಥವಾ ಎಂ.ಎಲ್.ಸಿ ಆಗಲೇಬೇಕು, ಅದು ಬಿಟ್ಟು ಬೇರೆ ದಾರಿ ಇಲ್ಲ ಎಂದಿದ್ದಾರೆ.

ಚುನಾವಣೆ ಕೂಡ ಘೋಷಣೆಯಾಗಬೇಕು, ಇನ್ನೂ ಒಂದೆರೆಡು ತಿಂಗಳು ಟೈಮ್ ಇದೆ. ಈ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುತ್ತದೆ. ಎಲ್ಲರ ಅಭಿಪ್ರಾಯ ಪಡಿಯಲೇಬೇಕು ಹೀಗಾಗಿ ತಡವಾಗ್ತಿದೆ. ನಾನು ಯಾವುದೇ ಡಿಮ್ಯಾಂಡ್ ಮಾಡಿಲ್ಲ. ಪಕ್ಷ ಕೊಡುವ ಜವಾಬ್ದಾರಿ ಹಿಂದೆಯೂ ನಿಭಾಯಿಸಿದ್ದೇನೆ, ಮುಂದೆಯೂ ನಿಭಾಯಿಸ್ತೀನಿ. ಗೋಕಾಕ್ ಜನತೆಯ ಪರವಾಗಿ ನಿಲ್ಲುವುದು ನಮ್ಮ ಜವಾಬ್ದಾರಿ. ರಮೇಶ್ ಜಾರಕಿಹೊಳಿ ಮಂತ್ರಿಯಾದ್ರು ಅವರ ಅಳಿಯನೇ ಕೆಲಸ ಮಾಡೋದು ಎಂದು ವ್ಯಂಗ್ಯವಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *