ಮಾಜಿ ಸಿಎಂ ಕುಮಾರಸ್ವಾಮಿಯದ್ದು ಒಂದು ಬದುಕಾ ? – ಆರ್​. ಅಶೋಕ್​ ಪ್ರಶ್ನೆ

ಬೆಂಗಳೂರು: ನಾವು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರನ್ನು ಕೇಳ್ತೀನಿ  ಪಾಕಿಸ್ತಾನ ಬೆಂಬಲಿಸುವ ನಿಮ್ಮದು ಒಂದು ಬದುಕಾ ? ಎಂದು ಆರ್​. ಅಶೋಕ್​ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪಾಕಿಸ್ತಾನವನ್ನು ವಿರೋಧಿಸ್ತೀವಿ, ಪಾಕಿಸ್ತಾನವನ್ನು ಭೂಪಟದಲ್ಲಿ ಇಲ್ಲಂದಗೆ ಮಾಡ್ತೀವಿ, ಪಾಕಿಸ್ತಾನವನ್ನು ಬೆಂಬಲಿಸೋರನ್ನು ಗುಂಡಿಟ್ಟು ಕೊಲ್ಲಬೇಕು.  ನಮಗೆ ಪಾಕಿಸ್ತಾನ ರಾಷ್ಟ್ರಧ್ವಜ ನೋಡಿದರೆ ಸಿಟ್ಟು ಬರುತ್ತೆ ಎಂದು ಆರ್​.ಅಶೋಕ್​ ಆಕ್ರೋಶ ಹೊರಹಾಕಿದರು.

ಇನ್ನೂ ಇದೇ ವೇಳೆ ಮಂಗಳೂರು ಬಾಂಬ್​ ಪ್ರಕರಣ ವಿಚಾರವಾಗಿ ಹೇಳಿಕೆ ನೀಡಿದ್ದ ಕುಮಾರಸ್ವಾಮಿ  ಮಾತಿಗೆ ತಿರುಗೇಟು ನೀಡಿದ ಅವರು. ಪೊಲೀಸರ ಬಗ್ಗೆ ಅನುಮಾನ ಬರೋ ರೀತಿಯಲ್ಲಿ ಮಾತಾಡಿದ್ದಾರೆ.ಅವರು ಅಧಿಕಾರದಲ್ಲಿರೋವಾಗ ಪೊಲೀಸರು ಬೇಕಿತ್ತು, ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ ಎಂದು ಆರ್​. ಅಶೋಕ್​ ಕಿಡಿಕಾರಿದರು.

Recommended For You

About the Author: user

Leave a Reply

Your email address will not be published. Required fields are marked *