ಜಮೀರ್ ಅಹ್ಮದ್‌ಗೆ ಎಚ್ಚರಿಕೆ ಕೊಡ್ತಿದ್ದೇನೆ: ರೇಣುಕಾಚಾರ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಪೌರತ್ವ ಕಾರ್ಯ ವಿರೋಧಿಸುವರ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ -ಜೆಡಿಎಸ್ ಹಾಗೂ ಕೆಲ ಅಲ್ಪ ಸಂಖ್ಯಾತ ಮುಖಂಡರಿಗೆ ನಾನು ಬಹಿರಂಗ ಸವಾಲು ಹಾಕುತ್ತಿದ್ದೇನೆ. ಮಸೀದಿಗಳಲ್ಲಿ ಫತ್ವಾ ಹೊರಡಿಸಿ ಕಾಯಿದೆ ವಿರುದ್ದ ಹೋರಾಟಕ್ಕಿಳಿಸಿದ್ದಾರೆ. ಇದು ನಮ್ಮ ದೇಶದ ಯಾವುದೇ ಮುಸಲ್ಮಾನರನ್ನು ಹೊರಗೆ ಹಾಕೋ ಕಾಯಿದೆ ಅಲ್ಲ. ಒಂದು ಅಂಶನಾದರೂ ತೋರಿಸಬೇಕಲ್ಲಾ? ಎಂದು ಪ್ರಶ್ನಿಸಿದ್ದಾರೆ.

ಓಟಿಗಾಗಿ ಕಾಯಿದೆ ವಿರೋಧ ಮಾಡಬೇಡಿ. ವಿನಾಕಾರಣ ಮೋದಿ, ಅಮಿತ್ ಶಾ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ಜಮೀರ್ ಅಹ್ಮದ್ ಮತ್ತು ಯು.ಟಿ ಖಾದರ್ ದೇಶದ್ರೋಹಿಗಳು. ಇವರು ಸಂಘ ಪರಿವಾರ ನಿಷೇಧ ಮಾಡಿ ಅಂತ ಹೇಳ್ತಿದ್ದಾರೆ. ಸಂಘ ಪರಿವಾರ ಈ ದೇಶದ ರಕ್ಷಣೆಗೆ ನಿಂತಿದೆ. ಪ್ರವಾಹ ಬಂದಾಗ ನೆರೆ ಸಂತ್ರಸ್ಥರ ಪರ ನಿಂತು ಜೀವದ ಹಂಗು ತೊರೆದು ಸಂಘದ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಜಮೀರ್ ಅಹ್ಮದ್ ಅವರೇ ಈ ರೀತಿ ಸಂಘ ಪರಿವಾರದ ಮೇಲೆ ಆರೋಪ ಮಾಡಿದರೆ ಸರಿಯಿರಲ್ಲ. ಜಮೀರ್ ಅಹ್ಮದ್‌ಗೆ ಎಚ್ಚರಿಕೆ ಕೊಡ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ರುದ್ರೇಶ್, ಶಿವು ಉಪ್ಪಾರ್, ಬಲಿಯಾದರಲ್ಲಾ? ಆವಾಗ ಎಲ್ಲಿ ಹೋಗಿತ್ತು ನಿಮ್ ಮಾನವೀಯತೆ..? ನಾನು ಕೆಲ ಮುಸಲ್ಮಾನ ಮುಖಂಡರಿಗೆ ಕೇಳ್ತೀನಿ? ನೀವು ನಿಜವಾಗಿಯೂ ಭಾರತದಲ್ಲಿ ಹುಟ್ಟಿದ್ದರೆ, ಈ ಕಾಯಿದೆ ವಿರೋಧ ಮಾಡ್ತಿರಲಿಲ್ಲ ಎಂದು ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *