ನಿಮ್ಮದೂ ರಾಜಕಾರಣವೇ? ನಿಮ್ಮದೂ ದೇಶ ಪ್ರೇಮವೇ? ಎಂಥ ಯಃಕಶ್ಚಿತ್ ಬದುಕು….?

ಪಾಕಿಸ್ತಾನ ಎಂಬ ದೇಶ ಈ ಭೂಪಟದಲ್ಲಿ ಇರದೇ ಹೋಗಿದ್ದರೆ ನೀವಿಲ್ಲಿ ಒಂದು ವೋಟು ಪಡೆಯಲೂ ಸಾಧ್ಯವಿರುತ್ತಿರಲಿಲ್ಲ. ಅದಕ್ಕಾಗಿಯೇ ಪಾಕ್ ನಾಮಸ್ಮರಣೆ ನಿಮ್ಮ ಕಾಯಕವಾಗಿಬಿಟ್ಟಿದೆ. ನಿಮ್ಮದೂ ರಾಜಕಾರಣವೇ? ನಿಮ್ಮದೂ ದೇಶ ಪ್ರೇಮವೇ? ಎಂಥ ಯಃಕಶ್ಚಿತ್ ಬದುಕು….? ಎಂದು ಬಿಜೆಪಿ ನಾಯಕೆ ವಿರುದ್ಥ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದಕರೂ ದೇಶದ್ರೋಹಿಗಳೇ ಅಲ್ಲವೇ ಬಿಜೆಪಿ ನಾಯಕರೇ? ಎಂದು ಇದೇ ವೇಳೆ ಮತ್ತೊಂದು ಟ್ವೀಟ್​ ಮಾಡುವ ಮೂಲಕ ಕುಮಾರಸ್ವಾಮಿ ಪ್ರಶ್ನೆ ,ಮಾಡಿದ್ದಾರೆ.

ನನ್ನನ್ನು ದೇಶದ್ರೋಹಿ, ಪಾಕಿಸ್ತಾನ ಪರ ವಾದಿ ಎಂದು ಕೂಗು ಮಾರಿಯಂತೆ ಅರಚುತ್ತಿರುವ ಪ್ರಹ್ಲಾದ್ ಜೋಶಿ ಅವರೇ, ದಿನಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುವ ನಿಮ್ಮ ಮೂಲ ಪಾಕ್ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯಾನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು. ನಾನು ಈ ಮಣ್ಣಿನವ‌ ಎಂದು ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *