‘ಯಾವುದೇ ಕಾರಣಕ್ಕೂ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಕೂಡದು’

ಮೈಸೂರು: ರಾಜ್ಯ ಸರ್ಕಾರದಿಂದ ಬಲವಂತವಾಗಿ ರೈತರ ಸಾಲ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ, ಬರದಿಂದ ತತ್ತರಿಸಿರುವ ರೈತರಿಂದ ಬಲವಂತವಾಗಿ ಯಾವುದೇ ಕಾರಣಕ್ಕೂ ಸಾಲ ವಸೂಲಿ ಮಾಡಬಾರದು. ರೈತರು ತಾವಾಗಿಯೇ ಸಾಲ ವಾಪಸ್ ಕೊಟ್ಟರೆ ತಗೆದುಕೊಳ್ಳಿ. ಆದರೆ ಅವರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬಾರದು. ಒಂದು ವೇಳೆ ವಸೂಲಿ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಬರದ ಕಾರಣಕ್ಕಾಗಿಯೇ ರೈತರಿಂದ ಬಲವಂತ ಸಾಲ ವಸೂಲಿ ಮಾಡಬಾರದೆಂದು ಹೇಳಿದ್ದೆ. ರಾಜ್ಯ ಸರ್ಕಾರದ ಈ ನಿಲುವನ್ನು ನಾನು ಖಂಡಿಸುತ್ತೇನೆ.

ಫ್ರೀ ಕಾಶ್ಮೀರ ಪ್ಲೇಕಾರ್ಡ್ ಪ್ರದರ್ಶಿಸಿದ ಪ್ರಕರಣದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಳಿನಿ ಪರ ವಕಾಲತ್ತು ವಹಿಸಬಾರದೆಂಬ ವಕೀಲರ ಸಂಘದ ನಿರ್ಧಾರ ಅಸಂವಿಧಾನಿಕ. ಆ ರೀತಿ ನಿರ್ಧಾರ ತೆಗೆದುಕೊಳ್ಳಲು ವಕೀಲರ ಸಂಘಕ್ಕೆ ಅವಕಾಶವೇ ಇಲ್ಲ. ಫ್ರೀ ಕಾಶ್ಮೀರ ಪ್ಲೇಕಾರ್ಡ್ ಪ್ರದರ್ಶಿಸಿದ್ದು ದೇಶ ದ್ರೋಹದ ಕೆಲಸವಲ್ಲ. ಕಾಶ್ಮೀರದಲ್ಲಿ ಇಂದಿಗೂ ತುರ್ತು ಪರಿಸ್ಥಿತಿ ಇದೆ. ಅದರಿಂದ ಮುಕ್ತಗೊಳಿಸಬೇಕೆಂಬ ಭಾವನೆಯಿಂದ ನಳಿನಿ ಪ್ಲೇಕಾರ್ಡ್ ಪ್ರದರ್ಶಿಸಿದ್ದಾಳೆ. ಮೈಸೂರು ವಕೀಲರ ಸಂಘ ವಕಾಲತ್ತು ಹಾಕಬಾರದೆಂದು ನಿರ್ಣಯ ಸರಿಯಲ್ಲ. ಇದನ್ನು ಪ್ರಶ್ನಿಸಿದ ಮಂಜುಳಾ ಮಾನಸ ಮೇಲೆ, ವಕೀಲರಿಂದ ಹಲ್ಲೆಗೆ ಯತ್ನ ನಡೆದಿರೋದನ್ನು ನಾನು ಖಂಡಿಸುವೆ ಎಂದಿದ್ದಾರೆ.

ಬಾಂಗ್ಲಾ ವಲಸಿಗರ ಶೆಡ್ಡುಗಳನ್ನ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರಿಗೆ ಮೊದಲು ಉಳಿದುಕೊಳ್ಳಲು ಸ್ಥಳ ಕೊಟ್ಟವರು ಇವರೇ. ಈಗ ಅವರನ್ನ ಓಡಿಸುವವರು ಇವರೇ. ಇದು ಯಾವ ರೀತಿ ನಿಲುವು..? ಇದು ಅವರ ದ್ವಂದ ನಿಲುವನ್ನು ತೋರಿಸುತ್ತದೆ. ಸಿಎಎ ಕಾಯ್ದೆಯಡಿ ಬಾಂಗ್ಲಾದಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎನ್ನುತ್ತಾರೆ. ಈಗ ಅವರನ್ನೆ ಓಡಿಸುತ್ತಿದ್ದಾರೆ, ಇದು ಸರಿಯಾದ ಕ್ರಮವಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *