ಮುರುಗೇಶ್​ ನಿರಾಣಿ ಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂಗೆ ಮನವಿ – ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬಾಗಲಕೋಟೆ: ಮಠಾಧೀಶರಾಗಿ ಸಮಾಜದ ಧ್ವನಿಯಾಗಿ ಸಿಎಂ ಗೆ ಮನವಿ ಹಾಗೂ ಸಲಹೆ ಕೊಡಬೇಕಾಗಿದ್ದು ನಮ್ಮ ಕರ್ತವ್ಯ ಹೀಗಾಗಿ ಆ ಸಲಹೆಯನ್ನ ವಚನಾನಂದ ಸ್ವಾಮೀಜಿ ನೀಡಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವಚನಾನಂದ ಸ್ವಾಮೀಜಿ ಹೇಳಿಕೆಯನ್ನ ಸಮರ್ಥಿಸಿಕೊಂಡರು.

ಇತ್ತೀಚೆಗೆ ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮಿಜಿ ಅವರು ಮುರುಗೇಶ್​ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕೆಂದು ಬೇಡಿಕೆ ಇಟ್ಟರು. ಆಗ ಸಿಎಂ ಕೆಂಡಾಮಂಡಲವಾಗಿ ಸ್ವಾಮೀಜಿ ಹಾಗೂ ಸಿಎಂ ನಡುವೆ ಮಾತಿನ ವಾಕ್​ ಪ್ರವಾಹ ನಡೆಯಿತು. ಈ ಕುರಿತು ಮಾತನಾಡಿದ ಸ್ವಾಮೀಜಿ, ಕೆಲವೊಂದು ಸಾರಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸವಾಗುವುದು ಸಹಜ. ಸಚಿವ ಸ್ಥಾನ ಕೊಡಬೇಕೆಂಬುದು ನಮ್ಮ ಅಭಿಪ್ರಾಯ ಅಲ್ಲ. ಅದು ಸಮಾಜದ ಅಭಿಪ್ರಾಯ ಎಂದರು.

ಈಗ ಶಾಸಕ ಮುರುಗೇಶ್ ನಿರಾಣಿಯವರಿಗೆ ಸಚಿವ ಸ್ಥಾನ ಕೊಡಬೇಕೆಂಬ ಚರ್ಚೆ ಶುರುವಾಗಿದೆ. ಮುರುಗೇಶ್ ನಿರಾಣಿ ವಿವಾದಾತೀತ ನಾಯಕರು. ಸಮಾಜದಲ್ಲಿ ಯಾವತ್ತೂ ಗುರುತಿಸಿಕೊಂಡವರಾಗಿದ್ದಾರೆ. ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಅಲ್ಲದೇ, ಕೈಗಾರಿಕೋದ್ಯಮದ ಮೂಲಕ ಎಲ್ಲ ಸಮುದಾಯದ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಸಾವಿರಾರು ರೈತಕುಟುಂಬಗಳಿಗೆ ನೆರವು ನೀಡಿದ್ದಾರೆ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮುರುಗೇಶ್ ನಿರಾಣಿಯವರಿಗೆ ಸಚಿವ ಸ್ಥಾನ ಕೊಡಬೇಕು. ಇದು ಕೇವಲ ಪಂಚಮಸಾಲಿ ಪೀಠದ ಬಯಕೆಯಲ್ಲ. ಸಮಾಜಬಾಂದವರ ಬಯಕೆಯಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠವು ಸಹ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರಸ್ತಾಪ ಮಾಡುತ್ತದೆ. ಈ ಹಿಂದೆಯೂ ಹೇಳಿದ್ದೇವೆ ಈಗಲೂ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಬಿಎಸ್​ ಯಡಿಯೂರಪ್ಪಗೆ ಮನವಿ ಮಾಡುತ್ತೇವೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *