ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್​ ಮಾಡಿದ ಸಚಿವ ಎಚ್. ನಾಗೇಶ್

ಕೋಲಾರ:  ಸಚಿವ ಸ್ಥಾನಕ್ಕೆ ಸ್ವಾಮೀಜಿಗಳ ಒತ್ತಡ ವಿಚಾರವಾಗಿ ಅಬಕಾರಿ ಸಚಿವ ಎಚ್. ನಾಗೇಶ್ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ವರ್ತನೆ ಸಮಂಜಸವಲ್ಲ, ನಮ್ಮ ಛಲವಾದಿ ಸಮುದಾಯದಲ್ಲು ಸ್ವಾಮೀಜಿಯಿದ್ದಾರೆ ಅವರು ಎಂದು ಯಾವುದಕ್ಕು ಒತ್ತಡ ಹಾಕಿಲ್ಲ, ಸಿಎಂ ಯಡಿಯೂರಪ್ಪ ಇದ್ದ ವೇದಿಕೆ ಮೇಲೆ ಹಾಗೆ ಒತ್ತಡ ಹಾಕೋದು ಸರಿಯಲ್ಲ,ಬೇಕಾದರೆ ಸಲಹೆ ಕೊಡಲಿ, ವೇದಿಕೆ ಮೇಲೆ ಕೇಳೋದು ಸಮಂಜಸ ಅನ್ನಿಸಲಿಲ್ಲ ಎಂದು ಎಚ್ ನಾಗೇಶ್ ಹೇಳಿದರು.

ಇನ್ನೂ ಈ ರೀತಿ ಮಾಡುವುದು ಸಿಎಂ ಅವರ ಘನತೆಗೆ ಧಕ್ಕೆ ತರುವಂತೆ ಮಾಡುವ ಕೆಲಸ, ಅಲ್ಲದೇ ಚುನಾಯಿತರು ಆಯ್ಕೆ ಆಗೋದು ಜನರಿಂದ, ಇವರಿಂದಲ್ಲ,ರಾಜಿನಾಮೆ ಕೊಡಿಸೊದು ಜನರ ಕೈಯಲ್ಲಿದೆ ಹೊರತು ಇವರ ಕೈಯಲಿಲ್ಲ, ಶಾಸಕರ ರಾಜಿನಾಮೆ ಕೊಡಿಸೊ ಸ್ವಾಮೀಜಿಗಳ ಹೇಳಿಕೆಗೆ ಎಚ್. ನಾಗೇಶ್ ಟಾಂಗ್ ಕೊಟ್ಟರು.

Recommended For You

About the Author: user

Leave a Reply

Your email address will not be published. Required fields are marked *