ಮೊಲದ ಕಿವಿಗಳಿಗೆ ಬಂಗಾರದ ಓಲೆ ತೊಡಿಸಿ ಕಾಡಿಗೆ ಬಿಟ್ಟ ಜನ..ಎಲ್ಲಿ? ಯಾಕೆ ಗೊತ್ತಾ..?

ಚಿತ್ರದುರ್ಗ: ಕಾಡಿ‌ನ ಮೊಲ ಹಿಡಿದು ಅದರ ಕಿವಿಗಳಿಗೆ ಬಂಗಾರದ ಓಲೆ ತೊಡಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗಿದೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಾಂಚೀಪುರ ಗ್ರಾಮದಲ್ಲಿ ಈ ಆಚರಣೆ ಮಾಡಲಾಯಿತು. ಪ್ರತಿ ವರ್ಷದಂತೆ ಈ ಭಾರಿಯೂ ಗ್ರಾಮಸ್ಥರು ಬೇಟೆಯಾಡಿ ಹಿಡಿದ ಮೊಲಕ್ಕೆ ಕಂಚೀಪುರದ ವರದರಾಜಸ್ವಾಮಿ ದರ್ಶನ ಮಾಡಿಸಿ ಮತ್ತೆ ಕಾಡಿಗೆ ಬಿಡುವ ಸಾಂಪ್ರದಾಯಿಕ ಆಚರಣೆ ಮಾಡಿದರು.

ಇನ್ನೂ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಬಂಗಾರದ ಓಲೆ ತೊಡಿಸಿ ವಿಶೇಷ ಪೂಜೆ ಸಲ್ಲಿಸಿ, ಮಳೆ ಬೆಳೆ ಸುಭೀಕ್ಷವಾಗಿ ಆಗಿ ನಾಡಿಗೆ ಒಳಿತಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ಹಿಂದೆ ಮೊಲದ ಕಾಲಿಗೆ ಬೆಳ್ಳಿ ಗೆಜ್ಜೆ ಕಟ್ಟಿ ಕಾಡಿಗೆ ಬಿಡುತ್ತಿದ್ದ ಗ್ರಾಮಸ್ಥರು. ಈ ವರ್ಷ ಬಂಗಾರದ ಓಲೆ ಹಾಕಿ ಪೂಜೆ ಬಳಿಕ ಮೊಲವನ್ನು ಕಾಡಿಗೆ ಬಿಟ್ಟು ಬಂದರು.

Recommended For You

About the Author: user

Leave a Reply

Your email address will not be published. Required fields are marked *