‘ಬೀದಿ ನಾಯಿಗಳಿಗೆ ಉತ್ತರ ಕೊಡದಂತೆ ನಮ್ಮ ಹಿರಿಯರು ಹೇಳಿದ್ದಾರೆ’

ವಿಜಯಪುರ: ಸಂಗಮೇಶ ನಿರಾಣಿ ನೀಡಿದ್ದ ಮಾತುಕತೆ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ರೋಡ್ ಚಾಪ್​ಗಳಿಗೆ ಉತ್ತರ ಕೊಡುವುದಿಲ್ಲ, ಅವರಿವರ ಆಹ್ವಾನ ಸ್ವೀಕರಿಸಲು ನಾನೇನು ರೋಡ್ ಚಾಪ್ ಲೀಡರ್ ಅಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಬೀದಿ ನಾಯಿಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ಹಿಂದೆಯೂ ಹೇಳಿದ್ದೆ. ರೋಡ್ ಚಾಪ್​ಗಳಿಲ್ಲ ಯತ್ನಾಳ್ ಉತ್ತರ ಕೊಡುತ್ತ ಹೋಗಬೇಕಾ(?) ರೋಡ್ ಚಾಪ್, ಬೀದಿನಾಯಿಗಳಿಗೆ ಉತ್ತರ ಕೊಡದಂತೆ ನಮ್ಮ ಹಿರಿಯರು ಹೇಳಿದ್ದಾರೆ ಎಂದು ಅವರು ಕಿಡಿಕಾರಿದರು.

ಅಲ್ಲದೆ, ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಉತ್ತರ ನೀಡಿಲ್ಲ, ಬಾಯಿ ಹರಿಬಿಟ್ಟರೇ ಜಾತಕ ಬಿಡುಗಡೆ(!) ಬಾಯಿ ಹರಿಬಿಟ್ಟರೇ ಬಹುದೊಡ್ಡ ಜಾತಕ ಹರಿ ಬಿಡ್ತೀನಿ. ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಸರಿ, ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟರಿಗರಲ್ಲ ಎಂದು ಸಂಗಮೇಶ್ ನಿರಾಣಿ ಅವರಿಗೆ ಯತ್ನಾಳ್ ಅವರು ವಾರ್ನಿಂಗ್​ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *