‘ಇನ್ನು 2-3 ದಿನದಲ್ಲಿ ಸಂಪುಟ ವಿಸ್ತರಣೆಯಾದ್ರು ಅಚ್ಚರಿ ಇಲ್ಲ’

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪ್ರವಾಸ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​ ಅವರು, ಸಿಎಂ ಯಾರ ಒತ್ತಡಕ್ಕೂ ಮನಿಯಲ್ಲ, ಯಾರ ಬ್ಲಾಕ್ ಮೇಲ್​ಗೂ ಮನಿಯೋದಿಲ್ಲ, ನಮ್ಮ ಹಾಗೇ ಅವರು ಗಟ್ಟಿಯಾಗಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ಯಾರನ್ನು ಮಣ್ಣಲ್ಲಿ ಇಡಬೇಕೋ ಇಡ್ತಾರೆ, ಯಾರನ್ನು ಮೇಲಕ್ಕೆ ಇಡಬೇಕು ಅಂದ್ರೆ ಅವರನ್ನು ಮೇಲಕ್ಕೆ ಏರಿಸ್ತಾರೆ, ನಾನು ಯಡಿಯೂರಪ್ಪ ಜೊತೆ ಜಗಳವಾಡಿದ್ದೆ. ಒಪ್ಪಂದ ಆದ್ಮೇಲೆ ಆ ಭಾವನೆ ಇಬ್ಬರಲ್ಲೂ ಇಲ್ಲ, ಪ್ರವಾಸ ನಾವೇ ಕ್ಯಾನ್ಸಲ್ ಮಾಡಿಸಿದ್ದೀವಿ ಅಂತಾ ಕೆಲವರು ಹೇಳುತ್ತಿರಬೇಕು, ಅಂತಾ ಲಫಂಗರು ವಿಜಯಪುರ ಜಿಲ್ಲೆಯಲ್ಲಿದ್ದಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ. ಇನ್ನು ಎರಡು-ಮೂರು ದಿನದಲ್ಲಿ ಸಂಪುಟ ವಿಸ್ತರಣೆಯಾದ್ರು ಅಚ್ಚರಿ ಇಲ್ಲ, ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಮಾಡೇ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು 16 ಖಾತೆಗಳು ಸಿಎಂ ಬಳಿ ಇವೆ. ಎಲ್ಲವನ್ನು ಅವರೊಬ್ಬರೇ ನಿಭಾಯಿಸಲು ಸಾಧ್ಯವಿಲ್ಲ, ರಾಜೀನಾಮೆ ನೀಡಿದ 17 ಜನರಿಗೆ ಕೊಟ್ಟ ಮಾತಿನಂತೆ ಸ್ಥಾನಮಾನ ನೀಡಲೇಬೇಕಿದೆ. ಇಲ್ಲಾಂದ್ರೆ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತೆ ಎಂದ ಬಸನಗೌಡ ಪಾಟೀಲ್​ ಯತ್ನಾಳ್ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *