ಬಸನಗೌಡ ಯತ್ನಾಳ್​ ಗೆ ತಿರುಗೇಟು ನೀಡಿದ ಮುರುಗೇಶ್​ ನಿರಾಣಿ ಸಹೋದರ.!

ಬಾಗಲಕೋಟೆ: ನಿನ್ನೆ ಶಾಸಕ ಮುರುಗೇಶ್ ನಿರಾಣಿ ಮೇಲೆ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವಾಗ್ದಾಳಿ ನಡೆಸಿದ್ದಕ್ಕೆ ಇಂದು ಉದ್ಯಮಿ ಸಂಗಮೇಶ್ ನಿರಾಣಿ ಅವರು ತಿರುಗೇಟು ನೀಡಿದ್ದಾರೆ.

ನಿನ್ನೆ ಯತ್ನಾಳ ಅವರು ಮಾತನಾಡಿ, ಮುರುಗೇಶ್ ನಿರಾಣಿ ಅವರು 2 ಮಠಗಳನ್ನು ನಡೆಸುತ್ತಿದ್ದಾರೆ. ಒಂದು ಕುಡಲಸಂಗಮ ಇನ್ನೊಂದು ದಾವಣಗೆರಿಯಲ್ಲಿ ಎಂದು ಹರಿಹಾಯ್ದಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಬಸನಗೌಡ ಯತ್ನಾಳ ಮನೆಯ ಮೂಲೆಯಲ್ಲಿ ಕುಳಿತಿದ್ದಾಗ ನಾವು ಅವರನ್ನು ಬೆಳೆಸಿದ್ದು, ಈ ನಾಡು ಕಟ್ಟಲು ಒಬ್ಬ ಒಳ್ಳೆಯ ನೇತಾರಬೇಕೆಂದು ಪರಿಶ್ರಮ ಪಟ್ಟು ಅವರನ್ನು ನೇತಾರರನ್ನಾಗಿ ಮಾಡಿದ್ದೇವೆ.

ಆದರೆ, ಅವನ ದುಷ್ಟ ಬುದ್ದಿಯಿಂದ ಯಾರು ಬೆಳೆಸಿದ್ದಾರೋ, ಅವರಿಗೆ ಮೋಸ ಮಾಡುವ ಚಾಳಿಯಿಂದ ಆತ ಹೀಗೆಲ್ಲ ಮಾತನಾಡಿದ್ದಾನೆ. ಆತ ನಾಲಿಗೆಯಿಲ್ಲದ ರೀತಿಯಲ್ಲಿ ಎಲ್ಲರಿಗೂ ಬೇಕಾಬಿಟ್ಟಿಯಾಗಿ ಮಾತನಾಡುವ ಚಾಳಿ ಬಿಡಬೇಕು. ಆತ ರಾಜಕೀಯವಾಗಿ, ಔದ್ಯಮಿಕವಾಗಿ ಸಚ್ಚಾರಿತ್ರ್ಯವುಳ್ಳವನಾಗಿದ್ದರೆ ಚರ್ಚೆಗೆ ಬರಲಿ ಸಿದ್ದರಿದ್ದೇವೆ ಎಂದು ಏಕವಚನದಲ್ಲಿಯೇ ಯತ್ನಾಳ ವಿರುದ್ಧ ಹರಿಹಾಯ್ದರು.

ಅಂತೆಯೇ ಮಾತನಾಡಿ, ಯತ್ನಾಳ ಅವರು ಗೂಂಡಾಗಿರಿ ಭಾಷೆಯಲ್ಲಿ ಮಾತನಾಡಿದರೆ. ನಾವು ಗೂಂಡಾಗಿರಿಯಲ್ಲಿ ಮಾತನಾಡೋಕೆ ಸಿದ್ದರಿದ್ದೇವೆ. ತನ್ಮ ಇತಿಮಿತಿಯಲಿ ರಾಜಕೀಯ ಧರ್ಮದಲ್ಲಿ ಮಾತನಾಡೋದು ಸೂಕ್ತ. ಜನ ಅವನನ್ನು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಅಲ್ಲದೇ, ಯತ್ನಾಳ್ ಅಧಿಕಾರಕ್ಕಾಗಿ ನಿರಾಣಿ ಮನೆಯ ನಾಯಿ, ಬೆಕ್ಕುಗಳ ಕಾಲನ್ನು ಹಿಡಿದಿದ್ದಾನೆ. ಅದನ್ನು ಅವರು ನೆನಪಿಸಿಕೊಳ್ಳಬೇಕು. ಅಧಿಕಾರ ಇಲ್ಲದಿದ್ದಾಗ ಮರಳಿ ಅಧಿಕಾರಕ್ಕೆ ಕೊಟ್ಟಂತವರು ಇದೆ ಸಂಗಮೇಶ ನಿರಾಣಿ. ಅದನ್ನು ಅವರೇ ಎಲ್ಲರೆದುರು ಹೇಳಿಕೊಂಡು ತಿರುಗಾಡಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳನ್ನು ಕೊಡುವುದನ್ನ ಬಿಡಬೇಕೆಂದರು.

Recommended For You

About the Author: user

Leave a Reply

Your email address will not be published. Required fields are marked *