ಮುಂದಿನ ಮೂರು ವರ್ಷಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಕಟೀಲ್..!

ಮುಂದಿನ ಮೂರು ವರ್ಷಕ್ಕೆ ಅನ್ವಯವಾಗುವಂತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹಂಗಾಮಿ ಅಧ್ಯಕ್ಷರಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಎಸ್ವೈ ಆಶಯದಂತ 150 ಸ್ಥಾನ ಗೆಲ್ಲುವ ವಿಶ್ವಾಸವನ್ನು ನೂತನ ಅಧ್ಯಕ್ಷರು ವ್ಯಕ್ತಪಡಿಸಿದರು.

ಮಲ್ಲೇಶ್ವರಂಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದ ಹಿನ್ನಲೆಯಲ್ಲಿ ಅವರ ಅವಿರೋಧ ಆಯ್ಕೆಯನ್ನು ಚುನಾವಣಾ ವೀಕ್ಷಕರಾಗಿದ್ದ ಸಚಿವ ಸಿ.ಟಿ ರವಿ ಅಧಿಕೃತವಾಗಿ ಪ್ರಕಟಿಸಿದರು.

ಈ ವೇಳೆ ಮಾತನಾಡಿದ ಸಿ.ಟಿ ರವಿ, ನಾನು ಚುನಾವಣೆ ವೀಕ್ಷಕನಾಗಿದ್ದೆ, ಮಾಜಿ ಎಂ.ಎಲ್ ಸಿ ಅಶ್ವಥ್ ನಾರಾಯಣ್ ಚುನಾವಣಾಧಿಕಾರಿಯಾಗಿದ್ದರು. ಈಗಾಗಲೇ ನಮ್ಮ 20 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇಮಕ ಆಗಿದೆ. ರಾಜ್ಯಾಧ್ಯಕ್ಷರ ಚುನಾವಣೆ ನಡೆಸಲು ಅರ್ಹತೆ ಇದೆ ಎಂದು ರಾಷ್ಟ್ರೀಯ ಚುನಾವಣಾಧಿಕಾರಿಗಳು ಹೇಳಿದ ಕಾರಣ ನಾವು ರಾಜ್ಯಾಧ್ಯಕ್ಷ ಹುದ್ದೆ ಚುನಾವಣೆ ನಡೆಸಿದ್ದೇವೆ ಪಕ್ಷದ ಸಕ್ರೀಯ ಸದಸ್ಯರು ರಾಜ್ಯಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇತ್ತು ಬೆಳಿಗ್ಗೆ 9 ರಿಂದ 10ರವರಗೆ ಒಂದೇ ನಾಮಪತ್ರ ಸಲ್ಲಿಕೆ ಆಗಿತ್ತು ಆ ನಾಮಪತ್ರ ಪರಿಶೀಲನೆ ಮಾಡಿದ್ದೇವೆ. ನಾಮಪತ್ರ ಕ್ರಮಬದ್ದವಾಗಿದೆ. ಅಧಿಕೃತಗೊಂಡಂತ ಏಕೈಕ ನಾಮಪತ್ರ ನಳಿನ್ ಕುಮಾರ್ ಕಟೀಲ್ ಅವರದ್ದು ಹೀಗಾಗಿ ನಳೀನ್ ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿ ಆಯ್ಕೆ ಪತ್ರವನ್ನು ನೀಡಿದರು.

ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್,ಯಡಿಯೂರಪ್ಪ ಸಿಎಂ ಆದ ನಂತರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅಮಿತ್ ಶಾ ನಿಯುಕ್ತಗೊಳಿಸಿದ್ದರು. ಇಂದು ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದು ನಾನು ಅಧಿಕೃತ ಆಯ್ಕೆ ಆಗಿದ್ದೇನೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *