‘ಗುತ್ತಿಗೆ ಪಟ್ಟಿಯಿಂದ ಹೊರಗಿಡುವ ಬಗ್ಗೆ ಎಂಎಸ್​ ಧೋನಿಗೆ ಮಾಹಿತಿ ನೀಡಲಾಗಿದೆ’ – ಬಿಸಿಸಿಐ

ನವದೆಹಲಿ: ಭಾರತ ತಂಡ ಮಾಜಿ ನಾಯಕ, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಂಪೂರ್ಣ ಕೈಬಿಟ್ಟಿಲ್ಲ. ಆದರೆ, ಅವರು ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅರ್ಹತೆ ಪಡೆದಿಲ್ಲ. ಇದರ ಬಗ್ಗೆ ಎಂಎಸ್​ ಧೋನಿ ಅವರ ಆಗಮನಕ್ಕೂ ತಂದಿದ್ದೇವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ಮಹೇಂದ್ರ ಸಿಂಗ್ ಧೋನಿ ಅವರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಕೈಬಿಡುವುದು ಅನಿವಾರ್ಯವಾಗಿತ್ತು ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸುವ ಮುನ್ನ ಅವರಿಗೆ ಸರಿಯಾದ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಜನವರಿ 16ರಂದು ಬಿಸಿಸಿಐ ಬಿಡುಗಡೆ ಮಾಡಿರುವ 2019-2020ರ ಗುತ್ತಿಗೆ ಒಪ್ಪಂದ ಪಟ್ಟಿಯಿಂದ ಎಂಎಸ್​ಡಿ ಅವರನ್ನು ಕೈಬಿಡಲಾಗಿದ್ದು, ಕಳೆದ ಬಾರಿ ಎ ಗ್ರೇಡ್ ನಲ್ಲಿ ಸ್ಥಾನ ಪಡೆದಿದ್ದ ಧೋನಿ ಈ ಬಾರಿ ಯಾವುದೇ ವಿಭಾಗದಲ್ಲಿ ಸ್ಥಾನ ಪಡೆದಿಲ್ಲ.  ಪಟ್ಟಿಯಿಂದ ಧೋನಿ ಕೈಬಿಟ್ಟಿರುವುದಕ್ಕೆ ಧೋನಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಅಧಿಕಾರಿಗಳು, ಧೋನಿ ಅವರು ಕಳೆದ 6 ತಿಂಗಳಿಂದ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರು ಈ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ, ಈ ಕುರಿತು ಬಿಸಿಸಿಐನ ಹಿರಿಯ ಅಧಿಕಾರಿಗಳು ಧೋನಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.

2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಎಂಎಸ್​ ಧೋನಿ ಸಂಪೂರ್ಣವಾಗಿ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ ಮತ್ತು ನಿವೃತ್ತಿಯ ಬಗ್ಗೆ ಮೌನ ತಾಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *