ಪವನ್ ಕಲ್ಯಾಣ್ ಜೊತೆ ಕೈಜೋಡಿಸಿದ ಮೋದಿ..!

ವಿಜಯವಾಡ: ಸರಣಿ ಚರ್ಚೆ ನಂತರ ಆಂಧ್ರದಲ್ಲಿ ಬಿಜೆಪಿ ಮತ್ತು ಜನಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಮೂಲಕ ರಾಜ್ಯದಲ್ಲಿ ಮೂರನೇ ಪ್ರಬಲ ಮೈತ್ರಿಕೂಟ ಹುಟ್ಟಿಕೊಂಡಿದೆ.

ಜನಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ನಟ ಪವನ್‌ ಕಲ್ಯಾಣ್‌ ಮತ್ತು ಆಂಧ್ರ ಬಿಜೆಪಿ ಅಧ್ಯಕ್ಷ ಕಣ್ಣ ಲಕ್ಷ್ಮೀನಾರಾಯಣ ವಿಜಯವಾಡದಲ್ಲಿ ಇಂದು ಅಧಿಕೃತವಾಗಿ ಮೈತ್ರಿ ಘೋಷಿಸಿದ್ದಾರೆ. ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಆರಂಭಿಸಿ 2024ರ ಲೋಕಸಭೆ ಚುನಾವಣೆವರೆಗೆ ರಾಜ್ಯದ ಅಭಿವೃದ್ಧಿಗಾಗಿ ಹೋರಾಡಲು ಕೈಜೋಡಿಸಿವೆ.

ಪವನ್‌ ಕಲ್ಯಾಣ್‌ 2014ರ ಲೋಕಸಭೆ ಚುನಾವಣೆಗೂ ಮೊದಲು ಜನಸೇನಾ ಪಕ್ಷ ಹುಟ್ಟುಹಾಕಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ-ಟಿಡಿಪಿ ಮೈತ್ರಿಕೂಟ ಬೆಂಬಲಿಸಿದ್ದರು. ಆದರೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. 2019ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹೊತ್ತಿಗೆ ವರಸೆ ಬದಲಿಸಿದ್ದ ಅವರು, ಸಿಪಿಐ, ಸಿಪಿಐಎಂ ಮತ್ತು ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಂಡು ಜನಸೇನಾ ಪಕ್ಷ ಕಣಕ್ಕಿಳಿಸಿದ್ದರು. ಇದರಲ್ಲಿ ನಾಲ್ಕೂ ಪಕ್ಷಗಳು ಹೀನಾಯವಾಗಿ ಸೋತು ಹೋಗಿದ್ದವು. ಈ ಚುನಾವಣೆಯಲ್ಲಿ ಜನಸೇನಾ ಕೇವಲ ಒಂದು ವಿಧಾನಸಭಾ ಸ್ಥಾನ ಗೆದ್ದುಕೊಂಡಿತ್ತು. ಸ್ವತಃ ಪವನ್‌ ಕಲ್ಯಾಣ್‌ ತಾವು ಸ್ಪರ್ಧಿಸಿದ ಎರಡೂ ಸ್ಥಾನಗಳಲ್ಲಿ ಸೋತು ಹೋಗಿದ್ದರು. 120ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಠೇವಣಿ ಕಳೆದುಕೊಂಡಿತ್ತು. 25 ಲೋಕಸಭಾ ಸ್ಥಾನಗಳಲ್ಲೂ ಅಭ್ಯರ್ಥಿಗಳಿಗೆ ಠೇವಣಿ ಸಹ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಿಜೆಪಿಯ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಇದೀಗ ಈ ಎರಡೂ ಪಕ್ಷಗಳು ಒಟ್ಟಾಗಿವೆ.

Recommended For You

About the Author: user

Leave a Reply

Your email address will not be published. Required fields are marked *