ಬಹುನಿರೀಕ್ಷಿತ ಚಿತ್ರ ವೀರ ಮದಕರಿ ಸಿನಿಮಾ ಶೂಟಿಂಗ್‌ ಡೇಟ್ ಫಿಕ್ಸ್..

ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಅಭಿನಯಿಸುತ್ತಿರುವ ರಾಜವೀರ ಮದಕರಿ ನಾಯಕ ಚಿತ್ರದ ಶೂಟಿಂಗ್​ ಡೇಟ್​ ಫಿಕ್ಸ್​ ಆಗಿದ್ದು, ಇದೇ 21ರಿಂದ ಶೂಟಿಂಗ್​ ಆರಂಭವಾಗಲಿದೆ. ನಾಲ್ಕು ದಿನಗಳ ಕಾಲ ಕೇರಳದ ಜಲಪಾತಗಳಲ್ಲಿ ಶೂಟಿಂಗ್​ ನಡೆಸಲು ಚಿತ್ರತಂಡ ಪ್ಲಾನ್​ ಮಾಡಿದೆ. ಕೇರಳದ ನಂತ್ರ ಬೆಂಗಳೂರಿನಲ್ಲಿ ಸೆಟ್​ ನಿರ್ಮಿಸಿ, ಚಿತ್ರದ ಮುಖ್ಯ ಭಾಗಗಳನ್ನ ಚಿತ್ರಿಸಲಿದೆ. ಇದೇ 2020ಕ್ಕೆ ಚಿತ್ರ ತೆರೆಗೆ ಬರಲಿದೆ.

ಕನ್ನಡಿಗರ ಮನಗೆದ್ದ ಸ್ವೀಟಿ ಅನುಷ್ಕಾ
ಅನುಷ್ಕಾ ಶೆಟ್ಟಿ ಸಂಕ್ರಾಂತಿಗೆ ಕನ್ನಡದಲ್ಲಿ ಶುಭಾಶಯ ಕೋರುವ ಮೂಲಕ ಮತ್ತೊಮ್ಮೆ ಮಾತೃ ಭಾಷೆ ಪ್ರೀತಿ ಮೆರೆದಿದ್ದಾರೆ. ಸಂಕ್ರಾಂತಿಗೆ ದೇಶದ ವಿವಿಧ ಭಾಗಗಳಲ್ಲಿ ಯಾವ ಯಾವ ಹೆಸರಿನಲ್ಲಿ ಆಚರಿಸುತ್ತಾರೋ ಆ ಹೆಸರಿರುವ ಫೋಟೋವೊಂದನ್ನು ಶೇರ್​ ಮಾಡಿ, ಕನ್ನಡದಲ್ಲಿ ಸಂಕ್ರಾಂತಿ ವಿಶ್ ಮಾಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಅನುಷ್ಕಾ, ಕನ್ನಡದಲ್ಲಿ ಇದುವರೆಗೂ ಯಾವುದೇ ಸಿನಿಮಾ ಮಾಡದೇ ಇದ್ರು ಕನ್ನಡದ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಅನುಷ್ಕಾರ ಈ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

Recommended For You

About the Author: user

Leave a Reply

Your email address will not be published. Required fields are marked *