ಪಂಚೆಯುಟ್ಟು ತೊಡೆ ತಟ್ಟಿದ ಜೆಡಿಎಸ್ ಶಾಸಕ..!

ಹಾಸನ:  ಚಡ್ಡಿ ಹಾಕಿ ಕಬ್ಬಡಿ ಆಡುವುದನ್ನು ನಾವು ನೋಡಿದ್ದೇವೆ, ಅದರೇ ಇಲ್ಲೂಬ್ಬರು ಪಂಚೆಯುಟ್ಟು ಬಿಳಿ ಶರ್ಟ್ ಹಾಕಿ ಯುವಕರ ಜೊತೆ ಕಬ್ಬಡಿ ಆಟ ಆಡಿದ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮುದುಡಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಬಡಿ ಆಟ ಆಯೋಜನೆ ಮಾಡಲಾಗಿತ್ತು. ಹಾಗಾಗಿ ಅಲ್ಲಿಗೆ ಆಗಮಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಯುವಕರ ಓತ್ತಾಯಾದ ಮೆರೆಗೆ ಕಬ್ಬಡಿ ಆಟ ಆಡಿ ಯುವಕರನ್ನು ನಾಚಿಸುವುದಲ್ಲದೆ ಸ್ಥಳಿಯರನ್ನು ರಂಜಿಸಿದ್ದಾರೆ.

ಶಾಸಕರು ಕಬ್ಬಡಿ ಆಟ ಶುರು ಮಾಡಿದ ತಕ್ಷಣ ಶಿಳ್ಳೆ ಚಪ್ಪಾಳೆ ಜೋರಾಗಿದ್ದವು. ಸುಮಾರು ಹದಿನೈದು ನಿಮಿಷಗಳ ಕಾಲ ಕಬ್ಬಡಿ ಪಂದ್ಯವಾಡಿ ಎಲ್ಲರನ್ನು ರಂಜಿಸಿದ್ದಾರೆ. ಈಗ ಅದರ ವಿಡೀಯೋ ವೈರಲ್ ಆಗಿದ್ದು ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *