‘ನಾನು ಆಡಿದ ಮಾತುಗಳಿಂದ ಯಾರಿಗಾದರು ಬೇಸರವಾದರೆ ಕ್ಷಮೆ ಇರಲಿ’

ಬೆಂಗಳೂರು:  ವಿವಿಧ ಸಮಾಜಗಳ ಒತ್ತಡ ಸರಕಾರದ ಮೇಲೆ ನಿರಂತರವಾಗಿ ಇರುತ್ತದೆ. ವಚನಾನಂದ ಸ್ವಾಮಿಗಳ ಹೇಳಿಕೆ ಸಹಜ ಪ್ರಕ್ರಿಯೆ. ಇದರ ಬಗ್ಗೆ ಚರ್ಚೆ ಅನಾವಶ್ಯಕ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿ. ಎಲ್ಲಾ ಸ್ವಾಮೀಜಿಗಳು, ಸಾಧುಗಳು, ಸಂತರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ ಮತ್ತು ನನ್ನ ಮೇಲೆ ವಿಶ್ವಾಸವಿದೆ ಎಂದರು.

ನನ್ನ ಮೇಲೆ ಇದ್ದ ಸಲುಗೆ ಮತ್ತು ಪ್ರೀತಿಯಿಂದ ಇಂತಹ ಪ್ರತಿಕ್ರಿಯೆಗಳು ಸಹಜ. ಎಲ್ಲರೂ ನಮ್ಮವರೇ “ಬೈದವರೆನ್ನ ಬಂಧುಗಳು” ಎಂಬ ಬಸವಣ್ಣನವರ ಉಕ್ತಿಯಲ್ಲಿ ನಂಬಿಕೆ ಇಟ್ಟವನು. ಅಂದು ನಾನು ಆಡಿದ ಮಾತುಗಳಿಂದ ಯಾರಿಗಾದರು ಬೇಸರವಾದರೆ ಕ್ಷಮೆ ಇರಲಿ. ನಾಡಿನ ಶರಣರು, ಸಂತರು, ಸ್ವಾಮೀಜಿಗಳು, ಮಾರ್ಗದರ್ಶಕರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂದು ಭಾವಿಸಿದ್ದೇನೆ” ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *