‘ಕಾಲು ಹಿಡಿದು ರಾಜಕಾರಣ ಮಾಡಿದ್ದರೇ ಮುಖ್ಯಮಂತ್ರಿ ಆಗಿರುತ್ತಿದ್ದೆ’

ವಿಜಯಪುರ: ವಚನಾನಂದ ಸ್ವಾಮೀಜಿಗಳ ಅಸಹಾಯಕತೆ ದುರುಪಯೋಗವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುವಾರ ಶ್ರೀಗಳ ಬಗ್ಗೆ ಅನುಕಂಪದ ಮಾತುಗಳನ್ನು ಆಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆ ನಂತರ ಎಲ್ಲವು ಗೊತ್ತಾಗಲಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿದ ಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಆವಾಗ ಗೊತ್ತಾಗಲಿದೆ. ಸಚಿವ ಸಂಪುಟ ಮುಗಿಯಲಿ ನಾನು ಮಾತನಾಡುತ್ತೇನೆ ಎಂದು ಯತ್ನಾಳ್​ ಅವರು ಪರೋಕ್ಷವಾಗಿ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಮುನ್ಸೂಚನೆ ನೀಡಿದ್ದಾರೆ.

ಯತ್ನಾಳ್ vs ನಿರಾಣಿ

ಜೀವನದಲ್ಲಿ ನಾನು ಯಾರ ಕಾಲು ಹಿಡಿದಿಲ್ಲ, ನಮ್ಮ ತಂದೆ-ತಾಯಿ, ಮಠಾಧೀಶರು, ಅಟಲ್​ ಬಿಹಾರಿ ವಾಜಪೇಯಿ, ಎಲ್​.ಕೆ. ಅಡ್ವಾನಿ ಬಿಟ್ಟು ಬೇರೆಯವರ ಕಾಲು ಹಿಡಿದಿಲ್ಲ, ರಾಜಕಾರಣದಲ್ಲಿ ಯಾರ ಕಾಲು ಹಿಡಿದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಮೋದಿ ಕಾಲಿಗೆ ಬೀಳಬೇಡಿ ಅಂತಾ ಮೊದಲೇ ಹೇಳಿದ್ದಾರೆ. ಕಾಲು ಹಿಡಿದು ರಾಜಕಾರಣ ಮಾಡುವುದಿಲ್ಲ, ಅಂತಾ ಹಲ್ಕಾ ರಾಜಕಾರಣಿ ನಾನು ಅಲ್ಲ, ನಾನು ಕಾಲು ಹಿಡಿದು ರಾಜಕಾರಣ ಮಾಡಿದ್ದರೇ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಯತ್ನಾಳ್ ಅವರು ಸಂಗಮೇಶ್ ನಿರಾಣಿಗೆ ಟಾಂಗ್​ ಕೊಟ್ಟಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *