4 ಗಂಟೆ ಕಾಲ ಮಾಜಿ ಸಚಿವ ಕೆ.ಜೆ.ಜಾರ್ಜ್​​ ವಿಚಾರಣೆ ಮಾಡಿದ ಇಡಿ ಅಧಿಕಾರಿಗಳು

ಬೆಂಗಳೂರು: ಮಾಜಿ ಗೃಹಮಂತ್ರಿಗಳಿಗೆ ಅದ್ಯಾಕೋ ವಕ್ರದೆಸೆ ಶುರುವಾದಂತೆ ಕಾಣ್ತಿದೆ‌. ಇಷ್ಟು ದಿನ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಇಡಿ-ಐಟಿಯ ಕುಣಿಕೆಯಲ್ಲಿ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ದಾಯ್ತು. ಇದೀಗ ಕೇರಳದ ಕುವರ, ಮಾಜಿ ಗೃಹಮಂತ್ರಿ ಕೆ.ಜೆ ಜಾರ್ಜ್ ಕಡೆ ಇಡಿ ಮುಖಮಾಡಿದೆ.

ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್‌ಗೆ ಇಡಿ ಸಂಕಷ್ಟ ಎದುರಾಗಿದ್ದು, ಇಂದು ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಬೆಳಿಗ್ಗೆ 11.20ಕ್ಕೆ ವಕೀಲರ ಜೊತೆ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ ಜಾರ್ಜ್‌ಗೆ ಇಡಿ ಡೆಪ್ಯುಟಿ ಡೈರೆಕ್ಟರ್ ರಾಹುಲ್ ಸಿನ್ಹಾ ತೀವ್ರ ವಿಚಾರಣೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆ ಮಾತ್ರ ಊಟಕ್ಕೆ ಬಿಡುವು ನೀಡಲಾಗಿತ್ತು.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪ ಜಾರ್ಜ್‌ ಮೇಲಿದೆ. ಸುಮಾರು 4 ಗಂಟೆಗಳ ಕಾಲ ಜಾರ್ಜ್‌ ವ್ಯವಹಾರ, ಬ್ಯಾಂಕ್ ಖಾತೆ ಸೇರಿದಂತೆ ಇತರೆ ಮಾಹಿತಿ ಕಲೆಹಾಕಲಾಗಿದೆ. ಇವತ್ತಿನ ವಿಚಾರಣೆ ನಂತರ ಪ್ರತಿಕ್ರಿಯಿಸಿದ ಜಾರ್ಜ್‌, ಸಮನ್ಸ್ ಕೊಟ್ಟಿದ್ದರು ಅದಕ್ಕೆ ಬಂದಿದ್ದೀನಿ. ಮತ್ತೆ ಕರೆದರೆ ಬರ್ತಿನಿ ಅಂತ ಹೇಳಿದ್ದಾರೆ.

2014-15ರಲ್ಲಿ ಲೋಕಾಯುಕ್ತರಿಗೆ ನೀಡಿರುವ ಆಸ್ತಿ ಘೋಷಣೆ ಪತ್ರದಲ್ಲಿ ಎರಡೇ ಎರಡು ಆಸ್ತಿ ತಮ್ಮ ಹೆಸರಿನಲ್ಲಿದೆ ಅಂತ ದಾಖಲೆ ನೀಡಿದ್ದಾರೆ. ಅಷ್ಟೇ ಅಲ್ಲ 2008, 2013 ಮತ್ತು 2018ರ ಚುನಾವಣಾ ಪ್ರಮಾಣ ಪತ್ರದಲ್ಲಿ ಸಮರ್ಪಕವಾಗಿ ಆಸ್ತಿಯ ವಿವರ ನೀಡಿಲ್ಲವಂತೆ. ವಿದೇಶದಲ್ಲಿ ಹೊಂದಿರುವ ಹಲವಾರು ಕಂಪೆನಿಗಳ ವಹಿವಾಟ ಕೂಡ ಐಟಿಆರ್‌ನಲ್ಲಿ ತೋರಿಸಿಲ್ಲವಂತೆ. ಎಕ್ಸ್ ಇಂಡಿಯಾ ಸ್ಟೀಲ್ ಕಂಪೆನಿಯಲ್ಲಿ ಕೋಟಿ ಕೋಟಿ ಹೂಡಿಕೆ ಮಾಡಿದ್ದಾರೆ. ಬೇನಾಮಿ ಪ್ರಾಪರ್ಟಿಗಳ ಪಾಲುದಾರಿಕೆ ಇರೋದಾಗಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ದೂರು ನೀಡಿದ್ದಾರೆ. ಈ ಎಲ್ಲಾ ದಾಖಲೆ ಕ್ರೋಡೀಕರಿಸಿಕೊಂಡಿರುವ ಇಡಿ ಅಧಿಕಾರಿಗಳು ಇದೀಗ ಒಂದೊಂದೇ ಲೆಕ್ಕಾಚಾರ ಪಕ್ಕಾ ಮಾಡೋಕೆ ನೋಟಿಸ್ ಮೇಲೆ ನೋಟಿಸ್ ನೀಡೋಕೆ ಮುಂದಾಗಿದ್ದಾರೆ.

ಇಂದು ವಿಚಾರಣೆಗೆ ಹಾಜರಾಗುವಂತೆ ಜಾರ್ಜ್ ಪತ್ನಿ ಸುಜಾ ಜಾರ್ಜ್, ಮಕ್ಕಳಾದ ರಾಜಾ ಜಾರ್ಜ್, ರೆನಿತಾ ಜಾರ್ಜ್ ಅವರಿಗೂ ಇಡಿ ನೋಟಿಸ್ ನೀಡಿತ್ತು. ಆದರೆ, ಜಾರ್ಜ್‌ ಮಾತ್ರ ಹಾಜರಾಗಿದ್ದರು. ಕೇವಲ ವಿಚಾರಣೆ ನಡೆದು ಅದಕ್ಕೆ ಸೂಕ್ತ ದಾಖಲೆ ಒದಗಿಸಿದ್ರೆ ಜಾರ್ಜ್ ಸೇಫ್.

Recommended For You

About the Author: user

Leave a Reply

Your email address will not be published. Required fields are marked *