ರಶ್ಮಿಕಾ ಮಂದಣ್ಣ ಮನೆಯ ಐಟಿ ದಾಳಿಗೆ ಕಾರಣ ಏನು ಗೊತ್ತಾ..? ಕೋಟ್ಯಾಂಟರ ಮೌಲ್ಯದ ಆಸ್ತಿ ವಿವರ…!

ಕೊಡಗು: ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸೇರಿದ್ದು ಎನ್ನಲಾಗಿರುವ ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ವಿವರ ಪಡೆದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ತಂದೆ ಮದನ್ ಮಂದಣ್ಣರ ಹೆಸರಲ್ಲಿ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿರುವ ಎರಡು ಅಂತಸ್ತಿನ ಕೋಟಿ ಮೌಲ್ಯದ ಐಷರಾಮಿ ಬಂಗಲೆ, 2 ಐಷರಾಮಿ ಕಾರುಗಳು ಹಾಗೂ ವೀರಾಜಪೇಟೆ ಸಮೀಪದ ಮೈತಾಡಿ ಗ್ರಾಮದಲ್ಲಿ 24 ಎಕೆರೆ ಕಾಫಿ ತೋಟ ಇತ್ತೀಚೆಗೆ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಇದೆ ಎನ್ನಲಾಗುತ್ತೀದೆ.

ಇನ್ನೂ ವೀರಾಜಪೇಟೆ ವಿಜಯನಗರದಲ್ಲಿದ್ದ ಮನೆಯನ್ನು ಒಂದು ವರ್ಷದ ಹಿಂದಷ್ಟೇ 1.25 ಕೋಟಿಗೆ ಮಾರಿದ್ದಾರೆ. ವೀರಾಜಪೇಟೆಯಲ್ಲಿರುವ ಐಷರಾಮಿ ಕಲ್ಯಾಣ ಮಂಟಪ, ಸೆರಿನಿಟ್ ಹಾಲ್​​ನಲ್ಲಿ ಮದುವೆ ದಿನವೊಂದಕ್ಕೆ 1.50 ಲಕ್ಷ
ಬಾಡಿಗೆ ಇದ್ದು ಇವೆಲ್ಲವುಗಳ ಆದಾಯದ ಮೂಲಗಳನ್ನು ಆದಾಯ ತೆರೆಗೆ ಇಲಾಖೆಯ ಅಧಿಕಾರಿಗಳು ಶೋಧಿಸುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಕುಟುಂಬ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಸ್ಕೂಲ್ ಹಾಗೂ ಪೆಟ್ರೋಲ್  ಬಂಕ್ ಖರೀದಿಸಲು ಮುಂದಾಗಿದ್ದೆ ಐಟಿ ದಾಳಿಗೆ ಕಾಣರ ಎನ್ನಲಾಗುತ್ತೀದೆ.

ಈಗಾಗಲೇ ಸ್ಯಾಂಡಲ್​​ವುಡ್​​ನ ನಟಿ ರಶ್ಮಿಕಾ ಅವರ  ಮನೆಯಲ್ಲಿ ಬೆಳಗ್ಗೆಯಿಂದ ಎರಡು ತಂಡಗಳ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಸುಮಾರು 5 ಎಕರೆ ಜಾಗದಲ್ಲಿ ರೆಸಿಡೆನ್ಸಿಯಲ್ ಸ್ಕೂಲ್ ಹಾಗೂ ಪೆಟ್ರೋಲ್ ಬಂಕ್ ಖರೀದಿಸಲು ರಶ್ಮಿಕಾ ಕುಟುಂಬ ಮುಂದಾಗಿತ್ತು ಎನ್ನುವ ಬಗ್ಗೆ ದಾಖಲೆಗಳು ಐಟಿ ಅಧಿಕಾರಿಗಳ ತಂಡಕ್ಕೆ ಲಭ್ಯವಾಗಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ  ವಿಚಾರಣೆಗೆ ಹಾಜರಾಜುವಂತೆ ಐಟಿ ಅಧಿಕಾರಿಗಳಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ಅದು ಎಲ್ಲಿ?.ಯಾವಾಗ? ಎನ್ನುವ ಮಾಹಿತಿ ಲಭ್ಯವಾಗಿಲ್ಲ.

Recommended For You

About the Author: user

Leave a Reply

Your email address will not be published. Required fields are marked *