ಬಿಜೆಪಿ ಸೇರೋ ಸೂಚನೆ ಕೊಟ್ಟ ಸಿಎಂ ಇಬ್ರಾಹಿಂ..?!

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ ಬಿಜೆಪಿ ಸೇರೋ ಸೂಚನೆ ಬಿಟ್ಟುಕೊಟ್ಟಿದ್ದಾರೆ.

ನಾನು ಯಡಿಯೂರಪ್ಪ ಒಂದಲ್ಲ ಒಂದು ದಿನ ಸೇರೆ ಸೇರ್ತೀವಿ. ನಾನು ಅವರು ಒಂದೇ ರೈಲಿನಲ್ಲಿ ಪ್ರಯಾಣಿಸೋದು. ಆದ್ರೆ ನಿಲ್ದಾಣ ಬೇರೆ, ಯಾವಾಗ ಸೇರುತ್ತೇವೊ ಗೊತ್ತಿಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ. ಅಲ್ಲದೇ ಈ ವೇಳೆ ಮಾತನಾಡಿದ ಇಬ್ರಾಹಿಂ, ಯಡಿಯೂರಪ್ಪರನ್ನ ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಇಬ್ರಾಹಿಂ, ಲಿಂಗಾಯತ ಪ್ರತ್ಯೇಕ ಧರ್ಮ ಸಿದ್ದರಾಮಯ್ಯಗೆ ಬೇಡ ಎಂದೆ. ಈ ಜಗಳದಲ್ಲಿ ಬೀಳಬೇಡ ಎಂದರೂ ನನ್ನ ಮಾತು ಕೇಳಲಿಲ್ಲ ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *