‘ಸಿಎಎ ಗೊಂದಲದ ಬಗ್ಗೆ ಸಿಎಂ ಹೇಳಿದ್ರೆ ಜನರಿಗೆ ಧೈರ್ಯ ಬರುತ್ತದೆ’

ದಕ್ಷಿಣ ಕನ್ನಡ: ಸಿಎಎ ಗೊಂದಲವನ್ನು ಸರ್ಕಾರ ಕ್ಲಿಯರ್ ಮಾಡಬೇಕು. ಆಶಾ ಕಾರ್ಯಕರ್ತೆಯರು ಮನೆ ಮನೆ ಹೋದಾಗ ಗೊಂದಲ ಸೃಷ್ಟಿ, ಸರ್ಕಾರ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಕಾಂಗ್ರೆಸ್​ ಶಾಸಕ ಯು.ಟಿ.ಖಾದರ್​ ಅವರು ಗುರುವಾರ ಹೇಳಿದರು.

ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹೇಳಿದ್ರೆ ಜನರಿಗೆ ಧೈರ್ಯ ಬರುತ್ತದೆ. ರಾಜ್ಯದಲ್ಲಿ ಈ ಸಮಸ್ಯೆ ಇದೆ. ಮಾಹಿತಿ ಕಲೆ ಹಾಕಲು ಆದೇಶ ಕೊಟ್ಟಿಲ್ಲ ಎಂಬುದನ್ನು ಹೇಳಬೇಕು. ರಾಜ್ಯದ ಜನತೆಗೆ ವಿಶ್ವಾಸ ಬರುವ ಹೇಳಿಕೆ ನೀಡಬೇಕು ಎಂದರು.

ಇನ್ನು ಜನರು ಗೊಂದಲಕ್ಕೆ ಒಳಗಾಗಬಾರದು. ಜನರ ಗೊಂದಲ ನಮಗೆ ಅರ್ಥ ಆಗುತ್ತೆ. ವಿಶ್ವಾಸ ಕಡಿಮೆ ಆದಾಗ ಜನರಿಗೆ ಸಂಶಯ ಉಂಟಾಗುತ್ತೆ. 19ಕ್ಕೆ ಪಲ್ಸ್ ಪೋಲಿಯೊ ಕಾರ್ಯಕ್ರಮ ಇದೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಸರ್ವೆ, ಮನೆ ಐಡೆಂಟಿಫೀಕೆಷನ್ ಮಾಡುತ್ತಾರೆ. ಜನ ಇದಕ್ಕೆ ಸಹಕಾರ ಕೊಡಬೇಕು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಅವರು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *