ಬಿಜೆಪಿ ಗೂಂಡಾಗಳ ಪಾರ್ಟಿಯಾಗಿ ಬದಲಾಗಿದೆ : ದಿನೇಶ್​ ಗುಂಡೂರಾವ್​ ವಾಗ್ದಾಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಅಂತಹ ಗೊಂದಲವೇನೂ ಇಲ್ಲ. ಆದಷ್ಟು ಬೇಗ ಹೈಕಮಾಂಡ್​ ಕೆಪಿಸಿಸಿ ಅಧ್ಯಕ್ಷರನ್ನ ನೇಮಕ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗ, ವಲಸಿಗರು ಎನ್ನುವ ಭೇದ ಭಾವವಿಲ್ಲ. ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ನಮ್ಮವರೆ ಎಂದರು.

ಅಂತೆಯೇ ಮಾತನಾಡಿ, ಶಾಸಕ ಎಸ್.ಆರ್ ವಿಶ್ವನಾಥ್ ವಿರುದ್ಧ ಮಾತನಾಡಿ, ಶಾಸಕ ವಿಶ್ವನಾಥ್  ಹಾಗೂ ಅವರ ಕಾರ್ಯಕರ್ತರು ಗೂಂಡಾಗಳು. ಗೂಂಡಾಗಳ ರೀತಿಯಲ್ಲಿ ನಗರದ ಸೃಷ್ಟಿ ಕಾಲೇಜಿನಲ್ಲಿ ವರ್ತನೆ ಮಾಡಿದ್ದಾರೆ. ಈಗ ಬಿಜೆಪಿ ಗೂಂಡಾ ಪಾರ್ಟಿಯಾಗಿ ಬದಲಾಗಿಬಿಟ್ಟಿದೆ ಎಂದು ಗುಂಡೂರಾವ್​ ಅವರು ವಾಗ್ದಾಳಿ ನಡೆಸಿದರು.

ಅಲ್ಲದೇ, ಶಾಸಕ ವಿಶ್ವನಾಥ್ ಮತ್ತೊಬ್ಬರ ಸಿದ್ದಾಂತದಲ್ಲಿ ಮೂಗು ತೂರಿಸಲು ಯಾರು? ಚರ್ಚ್ ಸ್ಟ್ರೀಟ್, ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಗೂಂಡಾಗಿರಿ ಮಾಡಿದ್ದಾಗಿದೆ. ಈಗ ಸೃಷ್ಟಿ ಕಾಲೇಜಿನಲ್ಲಿ ಗೂಂಡಾಗಿರಿ ಮಾಡಲು ಹೋಗಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಅವರು ಎಸ್​.ಆರ್​ ವಿಶ್ವನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಅವರು ಆಗ್ರಹಿಸಿದರು.

ಇತ್ತೀಚೆಗೆ ನಗರದ ಕಾಲೇಜ್​ವೊಂದರ ಗೋಡೆಯಲ್ಲಿ ಸಿಎಎ ವಿರೋಧಿಸಿ ಹಾಗೂ ಪ್ರಧಾನ ಮಂತ್ರಿಗಳ ವ್ಯಂಗ್ಯ ಚಿತ್ರಗಳನ್ನು ಬಿಡಿಸಲಾಗಿತ್ತು. ಈ ಘಟನೆ ಹಿನ್ನೆಲೆ ಸ್ಥಳಕ್ಕೆ ಹೋಗಿದ್ದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಹಾಗೂ ಅವರ ಕಾರ್ಯಕರ್ತರು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಕಾಲೇಜಿಗೆ ಭೇಟಿ ನೀಡಿದ್ದರು, ಆಗ ವಿಶ್ವನಾಥ್ ಭೇಟಿಗೆ ಕೆಲವು ವಿದ್ಯಾರ್ಥಿಗಳು ಕಿಡಿಕಾರಿದ್ದರು.

ಅಲ್ಲದೇ, ವಿಶ್ವನಾಥ್​ ವಿರುದ್ಧ ಸಿಎಎ ವಿರೋಧಿ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದರು, ಜೊತೆಗೆ ವಿದ್ಯಾರ್ಥಿಗಳ ಡ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವಿದ್ಯಾರ್ಥಿಗಳು ಈ ಶಾಸಕರ ಮೇಲೆ ಆರೋಪಿಸಿದ್ದರು.

Recommended For You

About the Author: user

Leave a Reply

Your email address will not be published. Required fields are marked *