ಇಂದಿನಿಂದ ನಳೀನ್​ ಕುಮಾರ್​ ಕಟೀಲ್​ಗೆ ದೊಡ್ಡ ಜವಾಬ್ದಾರಿ!

ಬೆಂಗಳೂರು: ಇಂದಿನಿಂದ ಮೂರು ವರ್ಷ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಕಟ್ಟುವ ದೊಡ್ಡ ಜವಾಬ್ದಾರಿ ನಳೀನ್ ಕುಮಾರ್ ಅವರ ಮೇಲೆ ಬಿದ್ದಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಗುರುವಾರ ಹೇಳಿದರು.

ನಗರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ತಾಲೂಕು ಜಿಲ್ಲೆಗಳಿಂದ ನಮ್ಮೆಲ್ಲ ಪ್ರಮುಖರು ಬಂದು ಈ ಶುಭ ಸಮಾರಂಭದಲ್ಲಿ ಭಾಗಿಯಾಗಿರೋದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದಲ್ಲಿ ಮಾತ್ರ ಕಾರ್ಯಕರ್ತರ ಅಭಿಪ್ರಾಯ ಪಡೆದು ತಾಲೂಕು, ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವುದನ್ನು ಬೇರೆ ಯಾವ ಪಕ್ಷದಲ್ಲೂ ನೋಡಲು ಸಾಧ್ಯವಿಲ್ಲ, ಈಗಾಗಲೇ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎರಡು ಬಾರಿ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಮೂರು ವರ್ಷದಲ್ಲಿ 0ದರಿ ರಾಜ್ಯವನ್ನಾಗಿ ಮಾಡಲು, ರೈತನ ಹೊಲಕ್ಕೆ ನೀರು ಕೊಟ್ಟು, ಬೆಂಬಲ ಬೆಲೆ ಕೊಟ್ಟು, ರೈತ ನೆಮ್ಮದಿಯಿಂದ ಬದುಕುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಬಾರಿ ಒಂದು ಒಳ್ಳೆಯ ಬಜೆಟ್ ಮಂಡನೆ ಮಾಡಲಿದ್ದೇನೆ ಎಂದು ನುಡಿದರು.

ಮುಂಬರುವ ಚುನಾವಣೆಯಲ್ಲಿಯೂ 150 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ನಾವೆಲ್ಲಾ ಹೆಜ್ಜೆ ಇಡಬೇಕಿದೆ. ಬಿಜೆಪಿಗೆ ೧೭ ಶಾಸಕರು ರಾಜೀನಾಮೆ ಕೊಟ್ಟು ನಮ್ಮ ಜೊತೆ ಬಂದ ಪರಿಣಾಮ, ಇಂದು ನಾವು ಆಡಳಿತ ಪಕ್ಷದಲ್ಲಿ ಇದ್ದೇವೆ ಎಂದು ಹೇಳಿದರು.

ಸಂಘಟನೆ ಕಟ್ಟುವ ಸಂದರ್ಭದಲ್ಲಿ ಬಿಜೆಪಿಗೆ ಹೊಸದಾಗಿ ಬಂದ ಶಾಸಕರ ಅಭಿಪ್ರಾಯ ಪಡೆದು ಸಂಘಟನೆ ಬಲಪಡಿಸಲು ಉಪಯೋಗಿಸಿಕೊಳ್ಳೋದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಿಎಂ ಪರೋಕ್ಷವಾಗಿ ಅರ್ಹ ಶಾಸಕರನ್ನು ಪಕ್ಷದಲ್ಲಿ ಕಡೆಗಣಿಸೋದು ಬೇಡ ಎಂದು ಮನವಿ ಮಾಡಿದ್ದಾರೆ.

ಬೇರೆ ಬೇರೆ ಸಮುದಾಯದ ಮುಖಂಡರು ಬಿಜೆಪಿ ಸೇರಲು ಸಾಲಾಗಿ ನಿಂತಿದ್ದಾರೆ. ಜನವರಿ ೧೮ ರಂದು ಅಮಿತ್ ಶಾ ಹುಬ್ಬಳ್ಳಿಗೆ ಬರಲಿದ್ದಾರೆ. ಆ ದಿನ ೧ ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಸಿದ್ದತೆ ನಡೆದಿದೆ. ಬಹಳ ದಿನಗಳ ನಂತರ ಗೃಹ ಸಚಿವರು ಬರುತ್ತಿರುವ ಕಾರಣ, ಅದ್ದೂರಿಯಾಗಿ ಸ್ವಾಗತ ಕಾರ್ಯಕ್ರಮ ಮಾಡುವ ಕೆಲಸ ಹುಬ್ಬಳ್ಳಿ – ಧಾರವಾಡ ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ಕಾರ್ತಕರ್ತರಿಗೆ ಕರೆ ನೀಡಿದರು.

ಕಟೀಲ್ ಅವರು ಮೂರು ವರ್ಷ ಅದ್ಯಕ್ಷರಾಗಿ ಕೆಲಸ ಮಾಡಲು ನಾವೆಲ್ಲಾ ಸಹಕಾರ ನೀಡಬೇಕಿದೆ. ನಾನು ನಳೀನ್ ಕುಮಾರ್ ಕಟೀಲ್ ಅವರಿಗೆ ಶುಭ ಕೋರುತ್ತೇನೆ. ನೀವು ಮೂರು ವರ್ಷ ಕೆಲಸ ಮಾಡಲು ಎಲ್ಲಾ ರೀತಿಯ ಸಹಕಾರ ಕಾರ್ಯಕರ್ತರು ಕೊಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *