ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿಗೆ ಬಿಸಿಸಿಐ ಶಾಕ್!

ಬಿಸಿಸಿಐ (ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ) 2019-20ರ ಸಾಲಿನ ಒಪ್ಪಂದದ ಆಟಗಾರರ ಪಟ್ಟಿಯಲ್ಲಿ ಕೂಲ್​ ಕ್ಯಾಪ್ಟನ್​, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಅವರು ಹೆಸರನ್ನು ತೆಗೆದು ಹಾಕುವ ಮೂಲಕ ಬಿಸಿಸಿಐ ಕ್ರೀಡಾಭಿಮಾನಿಗಳಿಗೆ ಶಾಕ್​ ನೀಡಿದೆ.

ಈ ಪಟ್ಟಿಯಲ್ಲಿ ನಾಲ್ಕು ವಿಭಾಗಗಳಾಗಿ ವಿಗಂಡಣೆ ಮಾಡಿಲಾಗಿದ್ದು ಅದರಲ್ಲಿ A+ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಿಟ್​ಮ್ಯಾನ್ ರೋಹಿತ್​ ಶರ್ಮಾ, ಜಸ್ಪ್ರೀತ್​​ ಬುಮ್ರಾ ಸ್ಥಾನ ಪಡೆದುಕೊಂಡಿದ್ದು ಎಂಎಸ್​ ಧೋನಿ ಅವರ ಹೆಸರನ್ನು ಕೈಬಿಡಲಾಗಿದೆ.

ಅಲ್ಲದೇ ಈ ಹೊಸ ಒಪ್ಪಂದದ ಪಟ್ಟಿಯಲ್ಲಿ ಹೊಸದಾಗಿ ಸ್ಥಾನಗಿಟ್ಟಿಸಿಕೊಂಡವರು ಇದ್ದು,​ ನವದೀಪ್ ಸೈನಿ ಮಯಾಂಕ ಅಗ್ರವಾಲ್​, ಶ್ರೇಯಸ್ ಅಯ್ಯರ್​, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಹರ್ ಅವರು ಗುತ್ತಿಗೆ ಒಪ್ಪಂದದ ಪಟ್ಟಿ ಲಿಸ್ಟ್​ನಲ್ಲಿ ಸೇರ್ಪಡೆಗೊಂಡಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಪಂದ್ಯದಲ್ಲಿ ಆಡಿದ್ದ ಎಂ.ಎಸ್​.ಧೋನಿ ಅವರು ಮತ್ತೆ ಅವರು ಟೀಂ ಇಂಡಿಯಾ ಪರ ಯಾವ ಸರಣಿಯನ್ನು ಆಡಿಲ್ಲ.

Recommended For You

About the Author: user

Leave a Reply

Your email address will not be published. Required fields are marked *