‘ನಿಮ್ಮ ಶಾಸಕರು ಎಲ್ಲಿಯೂ ಓಡಿಹೋಗಲ್ಲ, ಮೊದಲು ಹಳೆ ಬಜೆಟ್ ಕೆಲಸ ಮುಗಿಸಿ’

ಬೀದರ್: ಉಪಚುನಾವಣೆಯಲ್ಲಿ ಗೆದ್ದ 17 ಜನ ಶಾಸಕರು ಎಲ್ಲೂ ಓಡಿ ಹೋಗುವುದಿಲ್ಲಾ, ನಾವು ಕರೆಯುತ್ತಿಲ್ಲಾ ಬಜೆಟ್ ಬಗ್ಗೆ ಮೊದಲು ಚರ್ಚೆ ಮಾಡಿ ಎಂದು ಸಿಎಂ ಬಿಎಸ್‌ವೈಗೆ ಮಾಜಿ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಮನವಿ ಮಾಡಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಮಾರ್ಚ್ ತಿಂಗಳಲ್ಲಿ ರಾಜ್ಯದ ಬಜೆಟ್ ಮಂಡನೆಗೆ ಮುಖ್ಯಮಂತ್ರಿಗಳು ಸಿದ್ದತೆ ನಡೆಸಿದ್ದು, ಈ ಹಿಂದಿನ ಎರಡು ವರ್ಷದ ಬಜೆಟ್‌ನಲ್ಲಿ ಒಂದು ಕೆಲಸ ಪೂರ್ಣಗೊಂಡಿಲ್ಲಾ. ಮೊದಲು ಹಿಂದಿನ ಬಜೆಟ್ ಅನುದಾನ ಪೂರ್ಣಗೊಳಿಸಿ ನಂತರ ಬಜೆಟ್ ಮಂಡಿಸಲಿ ಈ ಬಗ್ಗೆ ನಾವು ಈದನ್ನೇ ಕೇಳುತ್ತೇವೆ ಎಂದು ಹೇಳಿದ್ರು.

ಕಳೆದ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ 300 ಕೋಟಿ ಅನುದಾನ ನೀಡಿದ್ದೇವೆ. ನೀರಾವರಿ ಇಲಾಖೆಗೆ ಕೊಟ್ಟ ಬಜೆಟ್ ಎಲ್ಲಿ ಹೋಯಿತು ಮೊದಲು ಅದನ್ನ ಹೇಳಿ ಆನಂತ್ರ ಬಜೆಟ್ ಮಂಡನೆ ಮಾಡಿ. ಅದನ್ನ ಬಿಟ್ಟು ನಿಮ್ಮ ನೂತನ 17 ಶಾಸಕರ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ಅವರು ಎಲ್ಲಿ ಓಡಿ ಹೋಗುವುದಿಲ್ಲಾ ನಾವು ಅವರನ್ನ ಕರೆಯುತ್ತಿಲ್ಲಾ ಎಂದರು.

Recommended For You

About the Author: user

Leave a Reply

Your email address will not be published. Required fields are marked *