ಟಿವಿ-5 ಸುದ್ದಿ ವಾಹಿನಿಗೆ ಒಲಿದು ಬಂದ ಮತ್ತೊಂದು ಪ್ರಶಸ್ತಿ.!

ಬೆಂಗಳೂರು: ನಿಮ್ಮ ಟಿವಿ-5 ಕನ್ನಡ ಸುದ್ದಿ ವಾಹಿನಿಗೆ ಮತ್ತೊಂದು ಸಾಧನೆಯ ಗರಿ ಸಿಕ್ಕಿದೆ. ಇಂದು ಬೆಂಗಳೂರಿನ ಕೆಂಗೇರಿ ಬಡಾವಣೆಯ ಬಂಡೆಮಠದಲ್ಲಿ ಏರ್ಪಡಿಸಲಾಗಿದ್ದ ಸಂಕ್ರಾಂತಿ ಸಂಜೆ ಕಾರ್ಯಕ್ರಮದಲ್ಲಿ ಟಿವಿ-5 ಸುದ್ದಿ ವಾಹಿನಿಯ ಪೊಲಿಟಿಕಲ್​ ಎಡಿಟರ್ ಆದ​ ಗುರುಲಿಂಗಸ್ವಾಮಿ ಹೊಳಿಮಠ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉತ್ತರ ಕರ್ನಾಟಕ ಗೆಳೆಯರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸುಗ್ಗಿ ಹಬ್ಬ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಈ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಟಿವಿ-5 ಕನ್ಮಡ ವಾಹಿನಿಯ ಪೊಲಿಟಿಕಲ್ ಎಡಿಟರ್ ಗುರುಲಿಂಗಸ್ವಾಮಿ ಹೊಳಿಮಠ ಅವರು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈರೇಶ್ ಗೂಡಲಮನೆ, ನಾಗರಾಜ ಮಾಗನಗೇರಿ, ರಾಜು ಪವಾರ್ ಹಾಗೂ ಕುಮಾರಿ ಸಹನಾ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Recommended For You

About the Author: user

Leave a Reply

Your email address will not be published. Required fields are marked *