ಆಂಜನೇಯ ನಮ್ಮ ಜೊತೆ ಇದ್ದಾನೆ, ಕಾಪಾಡಿದ್ದಾನೆ – ಶಿವರಾಜ್​​ ಕುಮಾರ್​

ನೆಲಮಂಗಲ: ಆಂಜನೇಯ ನಮ್ಮ ಜೊತೆ ಇದ್ದಾನೆ, ಇಂದು ಕಾಪಾಡಿದ್ದಾನೆ ಎಂದು ನಟ ಶಿವರಾಜ್​ ಕುಮಾರ್​ ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಭಜರಂಗಿ – 2 ಚಿತ್ರದ ಚಿತ್ರೀಕರಣದ ವೇಳೆ ಅಗ್ನಿ ಅವಘಡ ಸಂಭವಿದ ಕುರಿತು ಮಾತನಾಡಿದ ಅವರು,  ಭಜರಂಗಿಯೇ ಕಾಪಾಡಿದ್ದಾನೆ.  ಗ್ಯಾಸ್ ಓಪನ್ ಆಗಿದ್ದರೆ ತುಂಬಾ ದೊಡ್ಡ ಅವಘಡ ಸಂಭವಿಸುತ್ತಿತ್ತು, ಸೆಟ್ ಗೆ ಗೋಣಿಚೀಲ ಬಳಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದರು.

ಇನ್ನೂ ನಾನು ಸೇರಿ 15 ರಿಂದ 20 ಜನ ಮುಖ್ಯ ಕಲಾವದರಿದ್ದರು.  ಸುಮಾರು 2೦೦ ಜನ ಜ್ಯೂನಿಯರ್ ಆರ್ಟಿಸ್ಟ್​​ಗಳು ಇದ್ದರು. ಒಬ್ಬರಿಗೂ ಯಾವುದೇ ಹಾನಿ ಆಗಿಲ್ಲ, ಅನಾಹುತನೂ ಆಗಿಲ್ಲ,  ಭಜರಂಗಿಯೇ ನಮ್ಮನ್ನು ಇಂದು ಕಾಪಾಡಿದ್ದಾನೆ. ಭಜರಂಗಿ ಹೆಸರಿಟ್ಟಿರುವುದರಿಂದ ಯಾವುದೇ ಅನಾಹುತವಾಗಿಲ್ಲ.  ಆಂಜನೇಯ ನಮ್ಮ ಜೊತೆ ಇದ್ದಾನೆ ಎಂದು ಶಿವರಾಜ್​​ ಕುಮಾರ್​ ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *