ಸಂಕ್ರಾಂತಿ ಹಬ್ಬಕ್ಕೆ ಶಿವಣ್ಣ, ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ.!

ಬೆಂಗಳೂರು: ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಅಭಿನಯದ ಭಜರಂಗಿ-2 ಚಿತ್ರದ ಪೋಸ್ಟರ್ ಇಂದು​ ಸಂಜೆ ರಿಲೀಸ್​ ಆಗಲಿದ್ದು, ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ಲಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಭಜರಂಗಿ-2 ಸಿನಿಮಾವು ಜಯಣ್ಣ ಹಾಗೂ ಭೋಗೇಂದ್ರ ಜಯಣ್ಣ ಫಿಲಂಸ್ ಅಡಿಯಲ್ಲಿ ಮೂಡಿ ಬರುತ್ತಿದ್ದು, ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಿದ್ದು, ಹರ್ಷ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಇದರ ಜೊತೆಗೆ ಸುದೀಪ್ ಅಭಿನಿಯದ ಕೋಟಿಗೊಬ್ಬ-3 ಚಿತ್ರದ ಮೋಷನ್​ ಪೋಸ್ಟರ್​ ಸಹ ಇಂದು ರಿವೀಲ್​ ಆಗಲಿದ್ದು, ಸುದೀಪ್​ ಅಭಿಮಾನಿಗಳಲ್ಲಿ ಸಂಕ್ರಾಂತಿ ಸಂಭ್ರಮ ಡಬಲ್​ ಆಗಿದೆ. ಈ ಸಿನಿಮಾದಲ್ಲಿ ಸುದೀಪ್ ಜತೆ ಮಡೊನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ, ನವಾಬ್ ಷಾ ಮುಂತಾದವರು ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಶಿವ ಕಾರ್ತಿಕ್​ ಸಾರಥ್ಯ ವಹಿಸಿಕೊಂಡಿದ್ದಾರೆ. ಇಂದು ಸಂಜೆ 6ಕ್ಕೆ ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ.

Recommended For You

About the Author: user

Leave a Reply

Your email address will not be published. Required fields are marked *