ನ್ಯೂಜಿಲೆಂಡ್​​ ವಿರುದ್ಧದ ಟಿ-20 ಸರಣಿಗಿಲ್ಲ ಸ್ಯಾಮ್ಸನ್​: ಬಿಸಿಸಿಐನಿಂದ ಮತ್ತೆ ಸಂಜು ಗೆ ಅನ್ಯಾಯ.!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿ ಬಳಿಕ ಟೀಮ್ ಇಂಡಿಯಾ, ವರ್ಷದ ಮೊದಲ ವಿದೇಶಿ ಪ್ರವಾಸ ಕೈಗೊಳ್ಳಲಿದೆ. ಕಿವೀಸ್​ ವಿರುದ್ಧ 5 ಪಂದ್ಯಗಳ ಟಿ20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟಿಸ್ಟ್​ ಸರಣಿ ಆಡಲಿದೆ. ಸದ್ಯ ಬಿಸಿಸಿಐ ಮೂರು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸಿದೆ.

ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ ತಂಡವನ್ನ ಪ್ರಕಟಿಸಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ,  ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಆಯ್ಕೆ ಮಾಡಿದೆ. ಆದರೆ, ಕೇರಳದ ವಿಕೆಟ್ ಕೀಪರ್ ಅಂಡ್​​ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್​ರನ್ನ ಡ್ರಾಪ್ ಮಾಡಿ ಶಾಕ್ ನೀಡಿದೆ.

ಕಳೆದ 5 ವರ್ಷಗಳಲ್ಲಿ ಸಾಕಷ್ಟು ಬಾರಿ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾದ್ರೂ ಬೆಂಜ್ ಕಾಯುತ್ತಲೇ ಕಾಲ ಕಳೆದ್ರು. ಆದ್ರೆ, ಲಂಕಾ ವಿರುದ್ಧದ ಪಂದ್ಯದ ಅಂತಿಮ ಪಂದ್ಯದಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಈ ಬೆನ್ನಲ್ಲೇ ನ್ಯೂಜಿಲೆಂಡ್​ ವಿರುದ್ಧದ ಟಿ-20 ಸರಣಿಯಿಂದ ಕೈಬಿಟ್ಟು ಅನ್ಯಾಯವೆಸಗಿದೆ.

2015ರಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ್ದ ಸಂಜು ಸ್ಯಾಮ್ಸನ್. ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಬಾಂಗ್ಲಾ ವಿರುದ್ಧದ ಸರಣಿಗೆ ಆಯ್ಕೆ ಆಗಿದ್ರು. ನಂತರದ ಬ್ಯಾಕ್​ ಟು ಬ್ಯಾಕ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದ ಸಂಜುಗೆ ಆಡುವ ಹನ್ನೋಂದರ ಬಳಗದಲ್ಲಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಶ್ರೀಲಂಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ನೀಡದ ಟೀಮ್ ಇಂಡಿಯಾ ಮ್ಯಾನೇಜ್​​ಮೆಂಟ್​ ಪುಣೆ ಅಂಗಳದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಸಂಜುರ ಅದೃಷ್ಟದ ಬಾಗಿಲು ತೆರೆದಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿದ್ದಂತೆ ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿ ಸಂಜುಗೆ ಶಾಕ್ ನೀಡಿದೆ.

2015ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ಸಂಜು ಸ್ಯಾಮ್ಸನ್​, 2ನೇ ಇಂಟರ್​​ನ್ಯಾಷನಲ್ ಮ್ಯಾಚ್ ಆಡಲು ಕಾದಿದ್ದು ಬರೋಬ್ಬರಿ 73 ಟಿ20 ಪಂದ್ಯಗಳು. ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್, 5 ವರ್ಷಗಳಲ್ಲಿ ಆಡಿದ್ದು ಜಸ್ಟ್​ ಎರಡೇ ಬಾಲ್​. ಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದ ಸಂಜು, 2ನೇ ಎಸೆತದಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಆದರೆ, ನಂತರದ ಸರಣಿಗಳಲ್ಲಿ ಮತ್ತಷ್ಟು ಅವಕಾಶ ಸಿಗುತ್ತೆಂಬ ನಿರೀಕ್ಷೆಯಲ್ಲಿದ್ದ ಸಂಜುಗೆ ಅಚ್ಚರಿ ಎಂಬಂತೆ ಮಗದೊಮ್ಮೆ ಟೀಮ್ ಇಂಡಿಯಾ ಬಾಗಿಲು ಮುಚ್ಚಿಕೊಂಡಿದೆ.

ನ್ಯೂಜಿಲೆಂಡ್ ಟಿ20 ಸರಣಿಯಿಂದ ಕೇರಳದ ಸಂಜುರನ್ನ ಕೈಬಿಟ್ಟಿದ್ದಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್ ವಿರುದ್ಧ ಸಿಡಿದೆದ್ದಿದ್ದಾರೆ. ರಿಷಬ್ ಪಂತ್ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ರೂ ತಂಡದಲ್ಲಿ ಚಾನ್ಸ್ ಮೇಲೆ ಚಾನ್ಸ್ ನೀಡಲಾಗ್ತಿದೆ. ಆದ್ರೆ ಸಂಜು ಸ್ಯಾಮ್ಸನ್​ಗೆ ಯಾಕೆ ಅವಕಾಶ ನೀಡ್ತಿಲ್ಲ ಅನ್ನೋದು, ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಎರಡು ಪಂದ್ಯಗಳನ್ನಷ್ಟೇ ಆಡಿದ್ದಾರೆ. ಟ್ವಿಟರ್‌ನಲ್ಲೂ ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಯಾಪ್ಟನ್​ ಕೊಹ್ಲಿ ಸ್ವಾರ್ಥ ಮನೋಭಾವದವರು, ಇನ್ನು ಮುಂದೆ ಯಾವುದೇ ಮಲಯಾಳಿ ಕೊಹ್ಲಿಯನ್ನ ಬೆಂಬಲಿಸಲ್ಲ ಎಂದಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ರಿಷಬ್ ಪಂತ್‌ಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂಬ ಸ್ಪಷ್ಟ ಸಂದೇಶ ಬಿಸಿಸಿಐ ಆಯ್ಕೆ ಸಮಿತಿ ನೀಡಿದೆ. ಆದ್ರೆ, ರಿಷಬ್ ಪಂತ್ ಸತತ ವೈಫಲ್ಯ ಅನುಭವಿಸುತ್ತಿದ್ದರೂ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಇದೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ನಲ್ಲಿ 5 ವರ್ಷದ ಕಾಯುವಿಕೆಯನ್ನ ಕೇವಲ 2 ಎಸೆತದಲ್ಲೇ ನಿರ್ಣಯಿಸಿದ್ದು ವಿಪರ್ಯಾಸವೇ ಸರಿ.

Recommended For You

About the Author: user

Leave a Reply

Your email address will not be published. Required fields are marked *