Top

ಜಿಲ್ಲಾಡಳಿತದ ಖಡಕ್ ಆದೇಶದ ನಡುವೆಯೂ ನಡೆಯಿತು ವಿಚಿತ್ರ ಜಾತ್ರೆ...!

ಜಿಲ್ಲಾಡಳಿತದ ಖಡಕ್ ಆದೇಶದ ನಡುವೆಯೂ ನಡೆಯಿತು ವಿಚಿತ್ರ  ಜಾತ್ರೆ...!
X

ಯಾದಗಿರಿ: ಜಿಲ್ಲಾಡಳಿತ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಎಸೆಯುವುದಕ್ಕೆ ನಿಷೇಧ ಮಾಡಿ ಖಡಕ್ ಆದೇಶ ಮಾಡಿತ್ತು. ನಿಷೇಧ ಆದೇಶ ಪಾಲನೆ ಮಾಡದ ಭಕ್ತರು ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನು ಎಸೆದು ತಮ್ಮ ಹರಕೆ ತಿರಿಸಿದ್ದಾರೆ.

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯು ಇಂದು ಲಕ್ಷಾಂತರ ಭಕ್ತರ ಸಮೂಹ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಮಲ್ಲಯ್ಯನ ಮಂದಿರದಿಂದ ಹೊನ್ನಕೆರೆಗೆ ಮಲ್ಲಯ್ಯನ ಪಲ್ಲಕ್ಕಿ ಗಂಗಾ ಸ್ನಾನಕ್ಕೆ ಮೆರವಣಿಗೆಯೊಂದಿಗೆ ಭಂಡಾರ ಎರೆಚುತ್ತಾ ಹೋಗುವಾಗ ಹರಕೆ ಹೊತ್ತ ಭಕ್ತರು ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನು ಎಸೆದು ಮೈಲಾರಲಿಂಗೇಶ್ವರನಿಗೆ ಹರಕೆ ತಿರಿಸಿದ್ದಾರೆ.

ಜಿಲ್ಲಾಡಳಿತ ಪಲ್ಲಕ್ಕಿ ಮೇಲೆ ಕುರಿಗಳನ್ನು ಎಸೆಯುವದಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು ಆದರೆ ,ಪೊಲೀಸರ ಕಣ್ಣು ತಪ್ಪಿಸಿ ಭಕ್ತರು ಮೂರು ಕುರಿ ಮರಿಗಳನ್ನು ಎಸೆದು ಭಕ್ತಿ ಪರಕಾಷ್ಠೆ ಮೆರೆದಿದ್ದಾರೆ. ಭಕ್ತರು ಜಾತ್ರೆಯಲ್ಲಿ ಪಲ್ಲಕ್ಕಿ ಮೇಲೆ ಕುರಿಗಳನ್ನು ಎಸೆಯಲು ತೆಗೆದುಕೊಂಡು ಬಂದಿದ್ದನ್ನು ಅರಿತ ಪೊಲೀಸರ ತಂಡ ಸುಮಾರು 900 ಕ್ಕು ಹೆಚ್ಚು ಕುರಿಗಳನ್ನು ಜಪ್ತಿ ಮಾಡಿದೆ.

Next Story

RELATED STORIES